

ಕಲಬುರಗಿ: ನಗರದ ಕಾಂತಾ ಕಾಲನಿಯ ಭಾನುವಾರ ಮನೆ ಕಳ್ಳತನ ನಡೆದಿದೆ. ಕಾಂತಾ ಕಾಲನಿ ನಿವಾಸಿ, ಹೊಟೇಲ್ ವ್ಯಾಪಾರಿ ಸಂಜೀವಕುಮಾರ ಸಿಂದಬAದಗಿ ಮನೆ ಕಳ್ಳತನವಾಗಿದೆ. ಡಿ.೨೯ರಂದು ಬೆಳಗ್ಗೆ ವೈಯಕ್ತಿಕ ಕೆಲಸಕ್ಕೆ ಹೊರಗೆ ಹೋಗಿದ್ದರು. ೧೧ಗಂಟೆಗೆ ಸಂಜೀವ ಪತ್ನಿ ಸಹ ಮಕ್ಕಳೊಂದಿಗೆ ೧೧ಗಂಟೆ ಸುಮಾರಿಗೆ ಊರಿಗೆ ಹೋಗಿದ್ದಾರೆ. ಡಿ.೩೦ರಂದು ಬೆಳಗ್ಗೆ ಸಂಜೀವ ಸಹೋದರ ಕರೆ ಮಾಡಿ ಮನೆ ಬಾಗಿಲು ತೆರೆದಿರುವ ವಿಷಯ ತಿಳಿಸಿದ್ದಾರೆ. ಮನೆಯಲ್ಲಿ ಅಲಮರಾ ತೆರೆದಿರುವುದು ಕಂಡು ಬಂದಿತ್ತು. ಮನೆಯ ಬೆಡ್ ರೂಮಿನಲ್ಲಿ ಇಟ್ಟಿದ ಆಲಮಾರ ಮುರಿದಿದ್ದು, ಅದರಲ್ಲಿನ ಬಟ್ಟೆಗಳು ಚಿಲ್ಲಾಪಿಲ್ಲಿಯಾಗಿದ್ದವು. ೧೦ ಗ್ರಾಂ ಬಂಗಾರದ ಚೈನ್, ಬಂಗಾರದ ೧.೫ ಗ್ರಾಂ ಕಿವಿ ಓಲೆ, ಬೆಳ್ಳಿಯ ತಲಾ ೨೦ ಗ್ರಾಂನ ೨ ಖಡೆ, ೭೦ ಸಾವಿರ ರೂ. ನಗದು ಸೇರಿ ೧.೪೪ ಲP್ಷÀ ರೂ. ಮೌಲ್ಯದ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿz್ದÁರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.