ರು.1.41 ಲ ಮೌಲ್ಯದ ಪಡಿತರ ಅಕ್ಕಿ ಜಪ್ತಿ

Crime Logo
Published on

ಕಲಬುರಗಿ: ಅನಧಿಕೃತವಾಗಿ ಸಾಗಿಸುತ್ತಿದ್ದ 1.41 ಲ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಆಳಂದ ಚೆಕ್​ಪೋಸ್ಟ್​ ಮಾರ್ಗವಾಗಿ ಪಡಿತರ ಅಕ್ಕಿ ಅಕ್ರಮ ಸಾಗಣೆ ಮಾಹಿತಿ ಮೇರೆಗೆ ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. 1.41 ಲ ರೂ. ಮೌಲ್ಯದ 43 ಕ್ವಿಂಟಾಲ್​ ಪಡಿತರ ಅಕ್ಕಿ ಹಾಗೂ ಆರು ಲ ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದೆ. ಚಾಲಕ ಕಿರಣ, ಅಕ್ಕಿ ಮಾಲಿಕ ಸಂತೋಷಗೌಡ, ಕೃಷ್ಣಾ ಲಾತೂರ ವಿರುದ್ಧ ಸಬ್​ ಅರ್ಬನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net