

ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೀಲಿ ಮುರಿದು ಅಲಮಾರಾದಲ್ಲಿದ್ದ ೧.೩೫ ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿದ ಟನೆ ಉಮರ್ ಕಾಲನಿಯಲ್ಲಿ ನಡೆದಿದೆ. ಮಹ್ಮದ್ ಶಬ್ಬಿರ್ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಗೆ ಕೀಲಿ ಹಾಕಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಮಾತನಾಡಿಸಿ ಬರಲು ಹೋಗಿದ್ದು, ವಾಪಸ್ ಬರುವ ವೇಳೆಗೆ ಮನೆಯಲ್ಲಿದ್ದ ೨ ತೊಲೆ ಬಂಗಾರದ ಬೋರಮಳಾ, ಒಂದು ತೊಲೆ ಕಿವಿಯೋಲೆ, ಲೇಡಿಜ್ ವಾಚ್ ಸೇರಿ ಒಟ್ಟು ೧.೩೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.