ರೀಲ್ಸ್ ಬಿಟ್ಟು ಅಧ್ಯಯನ ಮಾಡಿ

0608Klb01
Published on

ಕಲಬುರಗಿ: ಜ್ಞಾನ ಸಂಪತ್ತಿಗಿಂತ ಮಿಗಿಲಾಗಿದ್ದು ಯಾವುದೂ ಇಲ್ಲ. ಸತತ ಅಧ್ಯಯನ, ಪರಿಶ್ರಮದಿಂದ ಉನ್ನತ ಹುದ್ದೆ ಪಡೆಯಬಹುದು. ಪ್ರಸ್ತುತ ದಿನಗಳಲ್ಲಿ ಯುವಕರು ಮೊಬೈಲ್​, ಸಾಮಾಜಿಕ ಜಾಲತಾಣ, ರೀಲ್ಸ್ನತ್ತ ಆಸಕ್ತಿ ವಹಿಸುತ್ತಿದ್ದು, ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಮಂಗಳವಾರ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಜಿಲ್ಲಾ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಹಳ್ಳಿಯ ರೈತ ಕುಟುಂಬದಿಂದ ಬಂದ ನಾನು ಕನ್ನಡ ಮಾಧ್ಯಮದಲ್ಲಿಯೇ ಓದಿ, ಹೆಚ್ಚುವರಿ ಜಿಲ್ಲಾಧಿಕಾರಿ ಆಗಿದ್ದೇನೆ. ನಾನು ಬಡವ, ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ ಎಂಬ ಭಯ ಬದಿಗಿರಿಸಬೇಕು. ಕಠಿಣ ಶ್ರಮದಿಂದ ಅಧ್ಯಯನ ಮಾಡಿದರೆ ಕೆಎಎಸ್, ಐಎಎಸ್ ಪರೀಕ್ಷೆ ಪಾಸ್ ಮಾಡಬಹುದು ಎಂದರು.

ಸ್ಲಂ ಜನಾಂದೋಲನ ಕರ್ನಾಟಕದ ನಹಸಿಂಹ ಮೂರ್ತಿ ಮಾತನಾಡಿ, ಜಗತ್ತು ಬೌದ್ಧಿಕ ಜಾe್ಞನಕ್ಕೆ ಮಹತ್ವ ನೀಡುತ್ತಿದೆ. ಪ್ರಸ್ತುತ ಎಲ್ಲೆಡೆ ಎಐ(ಕೃತಕ ಬುದ್ಧಿಮತ್ತೆ) ಪ್ರಭಾವ ಬೀರುತ್ತಿದೆ. ಇಂತಹ ವೇಗದ ಕಾಲದಲ್ಲಿ ಕೀಳರಿಮೆ ಬಿಟ್ಟು, ಮುಂದಡಿ ಇಡಬೇಕಿದೆ ಎಂದರು.

ಸ್ಲಂ ಜನಾಂದೋಲನ ಕರ್ನಾಟಕದ ರೇಣುಕಾ ಸರಡಗಿ ಪ್ರಾಸ್ತಾವಿಕ ಮಾತನಾಡಿದರು. ೨೦೨೩-೨೪ನೇ ಸಾಲಿನಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಟೇಷನ್ ಬಜಾರ್ ಪಿಐ ಶಕೀಲ್ ಅಹ್ಮದ್, ಉಮೇಶ ಚವ್ಹಾಣ್, ದೀಪಕ್, ಲಕ್ಷ್ಮೀಕಾಂತ ಹುಬ್ಬಳ್ಳಿ, ಶರಣ ಅಂಗಡಗಿ, ಜನಾರ್ಧನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net