ರಿವರ್ ರಾಫ್ಟಿಂಗ್ ಸ್ಥಗಿತ

ಚಿತ್ರ 03ಎಸ್ ಡಿ ಪಿ 04.
Published on

ಸಿದ್ದಾಪುರ: ಬೇಸಿಗೆ ಆರಂಭ ಆಗುತ್ತಿದ್ದಂತೆ ಕೊಡಗಿನಲ್ಲಿ ಜಲಕ್ಷಾಮ ತಲೆದೋರಿದ್ದು, ತವರಿನಲ್ಲೇ ದಿನದಿಂದ ದಿನಕ್ಕೆ ಜೀವ ನದಿ ಕಾವೇರಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ದುಬಾರೆಯಲ್ಲಿ ನೀರಿನ ಅಭಾವದಿಂದ ಜಲಕ್ರೀಡೆಗೆ ಕಂಟಕ ಎದುರಾಗಿದ್ದು, ರಿವರ್ ರಾಫ್ಟಿಂಗ್ ಸ್ಥಗಿತಗೊಳಿಸಲಾಗಿದೆ.

ಮಾ.3 ರಿಂದ ಕಾವೇರಿ ನದಿಯಲ್ಲಿ ನೀರು ಇಲ್ಲದ ಕಾರಣ ದುಬಾರೆ ರಿವರ್ ರಾಫ್ಟಿಂಗ್ ಸ್ಥಗಿತಗೊಳಿಸಿದ್ದು, ಮಳೆ ಬಂದು ಕಾವೇರಿ ನೀರು ತುಂಬಿ ಹರಿಯುವವರೆಗೂ ರಾಫ್ಟಿಂಗ್ ನಡೆಸಲು ಸಾಧ್ಯವಿಲ್ಲ ಎಂದು ರಾಫ್ಟಿಂಗ್ ಸಂಘದ ಮಾಜಿ ಅಧ್ಯಕ್ಷ ಸಿ.ಎಲ್. ವಿಶ್ವ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net