

ಹಾಸನ: ಸಕಲೇಶಪುರ ಪುರಸಭೆ ವಾರ್ಡ ನಂ.13 ಸದಸ್ಯೆ ಅನ್ನಪೂರ್ಣೇಶ್ವರಿ ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ವೇಳೆ ಆರ್.ಪಿ.ಐ ನ ರಾಜ್ಯಾಧ್ಯಕ್ಷ ಸತೀಶ್ ಮಾತನಾಡಿ, ಸಕಲೇಶಪುರ ಪಟ್ಟಣದ ವಾರ್ಡ ನಂ.13ರ ಚಂಪಕನಗರದಲ್ಲಿ ಪುರಸಭಾ ಖಾತಾ ನಂ.2189/1972ರಲ್ಲಿ ಹೇಮಾವತಿ ಎಂಬುವರು ನಿವೇಶನ ಹೊಂದಿದ್ದು, ಕಟ್ಟಡ ಪರವಾನಿಗೆ ಪಡೆದು ಆರ್.ಸಿ.ಸಿ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ . ಹೇಮಾವತಿ ಅವರು ದಲಿತರು ಎಂಬ ಕಾರಣಕ್ಕೆ ಪುರಸಭಾ ಸದಸ್ಯೆ ಹಾಗೂ ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷೆಯು ಎಸ್.ಸಿ ಅನ್ನಪೂರ್ಣೇಶ್ವರಿ ತನ್ನ ಅಧಿಕಾರ ಬಳಸಿ ಮನೆ ಕಟ್ಟದಂತೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಆಕೆಯೇ ಅಕ್ರಮವಾಗಿ 3 ಅಂತಸ್ತಿನ ಮನೆ ನಿರ್ಮಿಸಿಕೊಂಡಿದ್ದು, ಹೇಮಾವತಿ ಅವರಿಗೆ ಕಟ್ಟಡದ ಕೆಲಸವನ್ನು ಮಾಡದ ಹಾಗೆ ಹಾಗೂ ಅಕ್ರಮ ಕಟ್ಟಡ ಕಟ್ಟುತಿದ್ದೀರಿ ಎಂದು ಜಾತಿ ನಿಂದನೆ ಮಾಡಿ ಅವಮಾನಿಸಿದ್ದು, ದಲಿತ ಕುಟುಂಬ ನಮ್ಮ ಪಕ್ಕದಲ್ಲಿ ಇರಬಾರದು ಎಂಬ ಒಂದೇ ಉದ್ದೇಶ ಇಟ್ಟುಕೊಂಡು, ದಿನ ನಿತ್ಯ ಹಿಂಸೆ ಕೊಡುತ್ತಿದ್ದಾರೆ ಎಂದ ಅವರು ಮನೆ ನಿರ್ಮಾಣಕ್ಕೆ ಅವಕಾಣ ಮಾಡಿಕೊಟ್ಟು, ಅನ್ನಪೂರ್ಣೇಶ್ವರಿ ಅವರ ಪುರಸಭೆ ಸದಸ್ಯತ್ವವನ್ನು ರದ್ದುಗೊಳಿಸಬೇಕು ಹಾಗೂ ಆಕೆಗೆ ಸಹಕಾರ ನೀಡುತ್ತಿರುವ ಸಕಲೇಶಪುರ ಪುರಸಭೆಯ ಮುಖ್ಯಾಧಿಕಾರಿ ರಮೇಶ್ ಕುಮಾರ್‌ರನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕು ಎಂದರು.
ಪ್ರತಿಭಟನೆಯಲ್ಲಿ .ವಿ ಮಾನವ ಹಕ್ಕಗಳ ವೇದಿಕೆ ರಾಜ್ಯ ಸಂಚಾಲಕ ಜೋಸೆಫ್, ಆರ್‌ಪಿಐ ಜಿಲ್ಲಾದ್ಯಕ್ಷ ಬೂದೇಶ್, ಜೈ ಭೀಮ್ ಬ್ರಿಗೇಡ್ ಜಿಲ್ಲಾದ್ಯಕ್ಷ ರಾಜೇಶ್, ಹರೀಶ್, ರಘವೀರ್, ನತರಾಜ್, ರಂಜಿತ್ ಕುಮಾರ್ ಶರತ್ ಕುಮಾರ್ ಇತರರು ಇದ್ದರು.