ರಿಂಗ್‌ರೋಡ್‌ ವಿದ್ಯುತ್ ದೀಪ ವ್ಯವಸ್ಥೆಗೆ ಮೇಲೆ ಕಳ್ಳರ ವಕ್ರದೃಷ್ಟಿ

33
Published on

ಮೈಸೂರು: ನಗರದ ರಿಂಗ್‌ರೋಡ್‌ನಲ್ಲಿ ಎರಡು ದಿನಗಳ ಹಿಂದೆಯಷ್ಟೇ ಹಾಕಲಾಗಿರುವ ಎಲ್‌ಇಡಿ ವಿದ್ಯುತ್ ದೀಪಗಳ ವ್ಯವಸ್ಥೆಗೆ ಕಳ್ಳರು ವಕ್ರದೃಷ್ಟಿ ಬಿದ್ದಿದೆ.

ಸಾತಗಳ್ಳಿ ಬಳಿ ಕಳ್ಳರು, ಕಂಬದಲ್ಲಿನ ಎಂಸಿಬಿ ಸ್ವಿಚ್ಸ್ ಕದ್ದಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಳಿಸುವುದೂ ಆಗಿದೆ. ಹಿಂದೆಯೂ ಪ್ರಾಯೋಗಿಕವಾಗಿ ವಿದ್ಯುದ್ದೀಪಗಳನ್ನು ಅಳವಡಿಸಿದ್ದಾಗಲೂ ಕಳ್ಳತನ ಪ್ರಕರಣಗಳು ನಡೆದಿದ್ದವು. ಇದೀಗಲೂ ಅದುವೇ ಮತ್ತೆ ಪುನರಾವರ್ತನೆಯಾಗಿದೆ.

‘ರಿಂಗ್‌ರೋಡ್‌ನಲ್ಲಿ ಕಳ್ಳರ ಕಾಟ ತಡೆಯಬೇಕಾಗಿದೆ. ಇದಕ್ಕಾಗಿ ರಾತ್ರಿ ಗಸ್ತು ಆರಂಭಿಸಲಾಗುವುದು. ಅಗತ್ಯ ಇರುವ ಕಡೆ ಸಿಸಿ ಕ್ಯಾಮೆರಾಗಳ ಅಳವಡಿಸಿ ನಿಗಾ ವಹಿಸುವುದಕ್ಕೆ ಯೋಜಿಸಲಾಗಿದೆ. ಇದಕ್ಕಾಗಿ ಇಂಡಿಯನ್ ಬ್ಯಾಂಕ್‌ನಿಂದ 5 ಲಕ್ಷ ರೂ. ಆರ್ಥಿಕ ನೆರವು ನೀಡಿದೆ’ ಎಂದು ಸಂಸದ ಪ್ರತಾಪ ಸಿಂಹ ಟ್ವಿಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net