ರಿಂಗ್ ರೋಡ್ ಕಾಮಗಾರಿಗೆ 15 ಕೋಟಿ ರೂ. ಅನುದಾನ

ring road visit
Published on

ಬೀದರ್: ಬಾಕಿ ಉಳಿದಿರುವ 4 ಕಿಲೋಮೀಟರ್ ಬೀದರ್ ರಿಂಗ್ ರೋಡ್ ಕಾಮಗಾರಿಗೆ 15 ಕೋಟಿ ರೂ. ಅನುದಾನ ಒದಗಿಸುವುದಾಗಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ(ಕೆಕೆಆರ್ ಡಿಬಿ)ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಭರವಸೆ ನೀಡಿದ್ದಾರೆಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ಜಿಪಂ ಸಭಾಂಗಣದಲ್ಲಿ ಶನಿವಾರ ರೇವೂರ ಅವರ ಅಧ್ಯಕ್ಷತೆಯಲ್ಲಿ ಕೆಕೆಆರ್ ಡಿಬಿಯ ಸಭೆ ಜರುಗಿದೆ. ಇದರಲ್ಲಿ ಭಾಗವಹಿಸಿದ ನಾನು ಅಲಿಯಾಬಾದನಿಂದ ಚಿಕ್ ಪೇಟ್ ಗೆ ಸೇರುವ 4 ಕಿಮೀ ರಿಂಗ್ ರೋಡ್ ಕಾಮಗಾರಿ ಬಾಕಿ ಉಳಿದಿರುವುದು ಹಾಗೂ ಇದರ ನಿರ್ಮಾಣ ಅಗತ್ಯತೆ ಬಗ್ಗೆ ಗಮನ ಸೆಳೆದಿರುವೆ. ಇದಕ್ಕೆ ಅವರು ಸ್ಪಂದಿಸಿದ್ದಾರೆ ಎಂದು ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಜಿಲ್ಲಾ ಉಸ್ತುವಾರಿ ಸಚಿವರು ವಾಮಮಾರ್ಗದ ರಾಜಕಾರಣದಿಂದ ರಿಂಗ್ ರೋಡ್ ನಲ್ಲಿನ ಅಲಿಯಾಬಾದ್- ಚಿಕ್ ಪೇಟ್ ವರೆಗಿನ ಕಾಮಗಾರಿ ಅಪೂರ್ಣವಾಗಿ ಉಳಿದಿದೆ. ಇದರಿಂದ ಸಾರ್ವಜನಿಕರಿಗೆ ತುಂಬ ಅನಾನುಕೂಲವಾಗುತ್ತಿದೆ. ತಕ್ಷಣ ಈ ಕಾಮಗಾರಿ ಮಂಡಳಿಯಿಂದ ಕೈಗೆತ್ತಿಕೊಳ್ಳಬೇಕು ಎಂದು ಕೋರಲಾಯಿತು. ನನ್ನ ಬೇಡಿಕೆ ಮತ್ತು ಕಾಮಗಾರಿ ನನೆಗುದಿರುವ ಬಿದ್ದಿರುವ ವಿಷಯ ಗಮನಕ್ಕೆ ತಂದ ಬಳಿಕ ರೇವೂರ ಅವರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ಅಗತ್ಯ ಅನುದಾನ ನೀಡುವ ಭರವಸೆ ಕೊಟ್ಟರು ಎಂದು ಹೇಳಿದ್ದಾರೆ.

ಶಾಸಕರಾದ ರಾಜಶೇಖರ ಪಾಟೀಲ್, ರಹೀಮ್ ಖಾನ್, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ, ಡಿಸಿ ರಾಮಚಂದ್ರನ್, ಸಿಇಒ ಗ್ಯಾನೇಂದ್ರಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net