

ಕಲಬುರಗಿ: ನಗರದ ಖರ್ಗೆ ಪೆಟ್ರೋಲ್ ಪಂಪ್‌ನಿAದ ಹುಮನಾಬಾದ್ ವೃತ್ತದವರೆಗಿನ ಸರ್ವೀಸ್ (ಸೇವಾ) ರೋಡ್ ಅತಿಕ್ರಮಣದಿಂದ ಎದುರಾಗುತ್ತಿದ್ದ ತೊಂದರೆಗೆ ಶಾಶ್ವತ ಪರಿಹಾರ ಒದಗಿಸಲು ರಸ್ತೆ ಅಭಿವೃದ್ಧಿಗೆ ಕೇಂದ್ರ ಸಚಿವರು ೫೭ ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ಸಂಸದ ಡಾ.ಉಮೇಶ ಜಾಧವ್ ತಿಳಿಸಿದ್ದಾರೆ.
ಹಲವು ವರ್ಷದಿಂದ ಈ ರಸ್ತೆ ಮಾರ್ಗದಲ್ಲಿ ಸಂಚಾರ ದಟ್ಟಣೆ, ರಸ್ತೆ ಸಮಸ್ಯೆಯಿಂದ ಪದೇ ಪದೆ ಅಪಘಾತಗಳು ಸಂಭವಿಸುತ್ತಿದ್ದವು. ಇದನ್ನು ಮನಗಂಡು ಕೇಂದ್ರ ಸಾರಿಗೆ ಸಚಿವರು, ಸಂಬಂಧಪಟ್ಟ ಮೇಲಾಧಿಕಾರಿಗಳನ್ನು ಭೇಟಿ ಮಾಡಿ, ಅತಿಕ್ರಮಣ ತೆರವಿಗೆ, ಸರ್ವಿಸ್ ರಸ್ತೆ ನಿರ್ಮಿಸಲು ಮನವಿ ಮಾಡಿದ್ದು, ಅದಕ್ಕೆ ಸ್ಪಂದಿಸಿದ ಸಚಿವರು 57 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ವಿಸ್ ರಸ್ತೆ ಸುಧಾರಣೆಯಿಂದ ಮುಖ್ಯ ರಿಂಗ್ ರಸ್ತೆ ಮೇಲೆ ದಟ್ಟಣೆ ಕಡಿಮೆ ಆಗುವ ಜತೆಗೆ ಜನರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸಂಸದ ಡಾ.ಉಮೇಶ ಜಾಧವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
4ಎ ಸ್ಯಾಚುರೇಷನ್ ಮೊಬೈಲ್ ಟವರ್ ಸ್ಥಾಪಿಸಿ: ಲೋಕಸಭಾ ಕ್ಷೇತ್ರದಲ್ಲಿ ಎರಡು ೪ಎ ಸ್ಯಾಚುರೇಷನ್ ಮೊಬೈಲ್ ಟವರ್‌ಗಳಿದ್ದು, ಜಿಲ್ಲೆಯ ೩೬ ಹಳ್ಳಿಗಳಲ್ಲಿ ಮೊಬೈಲ್ ಸಿಗ್ನಲ್ ಇಲ್ಲದ ಪ್ರದೇಶವೆಂದು ಗುರುತಿಸಲಾಗಿದೆ. ಈ ಗ್ರಾಮಗಳಿಗೆ ಅನುಕೂಲವಾಗುವಂತೆ ಹೆಚ್ಚುವರಿ ೪ಎ ಸ್ಯಾಚುರೇಷನ್ ಟವರ್‌ಗಳನ್ನು ಸ್ಥಾಪಿಸುವಂತೆ ಸಂಸದ ಡಾ.ಉಮೇಶ ಜಾಧವ್ ಒತ್ತಾಯಿಸಿದರು.
ದೆಹಲಿಯಲ್ಲಿ ಬುಧವಾರ ಕೇಂದ್ರ ರೈಲ್ವೆ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಸಲ್ಲಿಸಿ, ಟವರ್ ಇಲ್ಲದ್ದಕ್ಕೆ ಇ-ಆಡಳಿತ, ಮೊಬೈಲ್ ವಾಣಿಜ್ಯ ಸೌಲಭ್ಯ ಬಳಸಲು ಅನಾನುಕೂಲವಾಗಿದೆ. ಡೇಟಾ ಸಂವಹನಕ್ಕೆ ತಾಲೂಕುಗಳಿಗೆ ಅವಲಂಬಿತವಾಗಿದ್ದು, ತಕ್ಷಣ ಸ್ಪಂದಿಸಬೇಕು. ಅಫಜಲಪುರ-೫, ಸೇಡಂ-೩, ಚಿತ್ತಾಪುರ-೨, ಜೇವರ್ಗಿ-೫, ಕಲಬುರಗಿ ಗ್ರಾಮಾಂತರ-೯, ಚಿಂಚೋಳಿ, ಆಳಂದ ತಾಲೂಕಿನಲ್ಲಿ ತಲಾ ನಾಲ್ಕು ಗ್ರಾಮಗಳಲ್ಲಿ ಮೊಬೈಲ್ ಸಿಗ್ನಲ್ ಇಲ್ಲದಂತಾಗಿದೆ. ಈ ಗ್ರಾಮಗಳಿಗೆ ಅನುಕೂಲವಾಗುವಂತೆ ಟವರ್ ಅಳವಡಿಸಬೇಕು ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಶೀಘ್ರದಲ್ಲಿ ಈ ಗ್ರಾಮಗಳನ್ನು ಡಿಜಿಲೀಕರಣ ಮಾಡುವ ಭರವಸೆ ನೀಡಿದರು.
ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಪ್ರತಿಪಕ್ಷ ನಾಯಕ ವಿಠ್ಠಲ್ ರಾಠೋಡ್, ಶಹಾಬಾದ್ ತಾಲೂಕಿನ ಬಿ.ಬಿ.ನಾಯಕ, ಅಬ್ದುಲ್ ವಾಹೀದ್ ಮುನೀರ್ ಇತರರಿದ್ದರು.