ರಾಹುಲ್ ಅನರ್ಹತೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

h7-cong rahul
Published on

ಹುಬ್ಬಳ್ಳಿ: ಕಾಂಗ್ರೆಸ್ ರಾಷ್ಟ್ರೀಯ ನೇತಾರ ರಾಹುಲ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸುವಲ್ಲಿ ಬಿಜೆಪಿ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಪಕ್ಷದ ಕಾರ್ಯಕರ್ತರು ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.

ಅನರ್ಹತೆಯನ್ನು ಪ್ರಶ್ನಿಸಿ ರಾಹುಲ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈ ಕೋರ್ಟ್ ಇಂದು ತಿರಸ್ಕರಿಸಿದ ಬಳಿಕ ಕೆಪಿಸಿಸಿ ನಿರ್ದೇಶದ ಮೇರೆಗೆ ಹು-ಧಾ ಮಹಾನಗರ ಜಿಲ್ಲಾ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಕೇಂದ್ರ ಬಿಜೆಪಿ ಸರ್ಕಾರಕ್ಕೆ...ಪ್ರದಾನಿ ನರೇಂದ್ರ ಮೋದಿಗೆ...ಧಿಕ್ಕಾರ ಎಂದು ಘೊಷಣೆ ಕೂಗಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ ಮಾತನಾಡಿ, ರಾಹುಲ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಸಂಘಟಿಸಿದ ಬಳಿಕ ಬಿಜೆಪಿಯವರಿಗೆ ಭಯ ಉಂಟಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಆಗಲಿದೆ ಎಂದರು.

ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ದೀಪಾ ಗೌರಿ, ನವೀದ ಮುಲ್ಲಾ, ಶಹಜಮಾನ್ ಮುಜಾಹಿದ್, ನಾಗೇಶ ಕಲಬುರ್ಗಿ, ದೋರಾಜ್ ಮಣಿಕುಂಟ್ಲ, ಡಿ.ಎಂ. ದೊಡಮನಿ, ಪರ್ವೆಜ್ ಕೊಣ್ಣೂರ, ಹೂವಪ್ಪ ದಾಯಗೋಡಿ, ಆರೀಫ್ ಭದ್ರಾಪೂರ, ವಾದಿರಾಜ ಕುಲಕರ್ಣಿ, ವೀರಣ್ಣ ಹೀರೇಹಾಳ, ಗಂಗಾಧರ ದೊಡ್ಡವಾಡ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net