

ಕೊಳ್ಳೇಗಾಲ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ತಾಲೂಕಿನ ಹಳೇ ಅಣಗಳ್ಳಿ ಗ್ರಾಮದಲ್ಲಿ ರೈತರು ಜಾನುವಾರುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು.
ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂಭಾಗ ಒಣ ಹುಲ್ಲು ಹಾಕಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಂಜೆ 6.15ಕ್ಕೆ ಹುಲ್ಲಿನ ರಾಶಿಗೆ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದು ಅಗ್ನಿಸ್ಪರ್ಶ ಮಾಡಿದರು.
ರೈತರು ಸಂಕ್ರಾತಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಜೋಡಿ ಎತ್ತುಗಳಿಗೆ ಹಾಗೂ ಹಸು, ಕರುಗಳಿಗೆ ನಾನಾ ಬಣ್ಣಗಳಿಂದ ಸಿಂಗರಿಸಿದ್ದರು. ಕಿಚ್ಚು ಹಾಯಿಸುವುದನ್ನು ರಸ್ತೆಯ ಎರಡೂ ಬದಿಯಲ್ಲೂ ಗ್ರಾಮದ ಜನರು ವೀಕ್ಷಣೆ ಮಾಡಿದರು.
ರೈತ ಮುಖಂಡ ಅಣಗಳ್ಳಿ ಬಸವರಾಜು, ಊರಿನ ಗೌಡ ಶಿವಸ್ವಾಮಿ, ಶಿವಲಂಕಾರಪ್ಪ, ದಿಲೀಪ್, ಸಿದ್ದಲಿಂಗ, ಮಹೇಶ್, ಬಂಗಾರಿ, ನಿಂಗಪ್ಪ, ಸೋಮಪ್ಪ ಮತ್ತಿತರಿದ್ದರು.