ರಾಷ್ಟ್ರೀಯಮಟ್ಟದ ಸ್ಪರ್ಧೆಯಲ್ಲಿ ಎಸ್‌ಡಿಎಂ ರನ್ನರ್ಸ್

2-sdm
Published on

ಬೆಳ್ತಂಗಡಿ: ಮಂಗಳೂರಿನ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ, ರಾಷ್ಟ್ರಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ವಿವಿಧ ವಿಭಾಗಗಳಲ್ಲಿ ಬಹುಮಾನ ಗಳಿಸಿ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿದೆ.

ಟರ್ನ್ ಕೋಟ್ ಸ್ಪರ್ಧೆಯಲ್ಲಿ ಸುಮೇಧ ಗಾಂವ್ಕಾರ್ ಪ್ರಥಮ, ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಣವ್ ಕೃಷ್ಣ ಮತ್ತು ತೇಜನ್ ಪ್ರಥಮ, ಬೆಂಕಿ ಇಲ್ಲದೆ ಅಡುಗೆ ಮಾಡುವ ಸ್ಪರ್ಧೆಯಲ್ಲಿ ಅನ್ಸುಲಾ ಮತ್ತು ಅರ್ಪಿತಾ ಪ್ರಥಮ, ಮ್ಯಾಡ್ ಆಡ್ ಸ್ಪರ್ಧೆಯಲ್ಲಿ ವಿಬಿನ್, ಹರ್ಷಲ್, ಅಮೋಘ, ದಾನುಷ್, ರೋಹಿತ್, ಪವನ್ ಕುಮಾರ್ ಜೈನ್, ಮನ್ವಿತ್ ಶೆಟ್ಟಿ, ಮಯೂರ, ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಗುರುದತ್ತ ಮರಾಠೆ, ಕಾರ್ತಿಕ್, ತೇಜನ್, ಪ್ರನ್ವಿತ್, ನಿಜ ಕುಲಾಲ್, ಪ್ರಣವ್ ಕೃಷ್ಣ ತೃತೀಯ, ಶಾರ್ಕ್ ಟ್ಯಾಂಕ್ ಸ್ಪರ್ಧೆಯಲ್ಲಿ ಪ್ರಿಯದರ್ಶಿನಿ ಮತ್ತು ಆರ್ಯ ದಿನೇಶ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net