

ಚಿಕ್ಕೋಡಿ: ನವದೆಹಲಿಯಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಗುರುವಾರ ಸೌಹಾರ್ದಯುತವಾಗಿ ಭೇಟಿ ಮಾಡಿದರು.
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಮುರುಗುಂಡಿಯಿಂದ ಚಿಕ್ಕೋಡಿಯವರೆಗೆ 65 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ರಸ್ತೆ ಮಂಜೂರು ಮಾಡಿದ್ದಕ್ಕೆ ಕತಜ್ಞತೆ ಸಲ್ಲಿಸಿದರು. ಚಿಕ್ಕೋಡಿ ಪಟ್ಟಣದಿಂದ ಗೋಟೂರು ವರೆಗೆ ಚಿಕ್ಕೋಡಿ ಬೈಪಾಸ್ ಜತೆಗೆ 27 ಕಿ.ಮೀ. 4 ಲೆನ್ ಹೆದ್ದಾರಿ ರಸ್ತೆ ಡಿ.ಪಿ.ಆರ್. ಸಲ್ಲಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯನ್ನು ಕೂಡಲೇ ಅನುಮೋದನೆ ಮಂಜೂರು ಮಾಡಲು ಮನವಿ ಸಲ್ಲಿಸಿದರು.
ನಿಪ್ಪಾಣಿ ಮತಕ್ಷೇತ್ರದ ತವಂದಿ ಘಾಟ್ ಹತ್ತಿರ ಅಪಘಾತ ಹೆಚ್ಚು ಆಗುತ್ತಿರುವ ಕಾರಣ ಅಲ್ಲಿ ಬ್ರಿಡ್ಜ್ ನಿರ್ಮಿಸಲು ಹಾಗೂ ಮಾಂಗೂರ ಮತ್ತು ಸೌಂದಲಗಾ ಕ್ರಾಸ್ ಹತ್ತಿರ ಓವರ್ ಬ್ರಿಡ್ಜ್ ನಿರ್ಮಿಸಲು ಮತ್ತು ನಿಪ್ಪಾಣಿ ನಗರದ
ಜವಾಹರ ಕೆರೆಯ ಹೂಳೆತ್ತುವ ಕಾರ್ಯವನ್ನು ಮಾಡಿಕೊಡುತ್ತಿದ್ದು, ಇದಕ್ಕೆ ಸಹಕಾರ ನೀಡಿದ ಕೇಂದ್ರ ಸಚಿವರಿಗೆ ಧನ್ಯವಾದ ತಿಳಿಸಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಹಾರಾಷ್ಟ್ರ ರಾಜ್ಯಸಭಾ ಸದಸ್ಯ ಧನಂಜಯ ಮಹಾಡಿಕ, ಶಾಸಕ ಅಭಯ ಪಾಟೀಲ ಉಪಸ್ಥಿತರಿದ್ದರು