

ಚಿತ್ರದುರ್ಗ: ಜಿಲ್ಲೆಯಲ್ಲಿ ಹಾದುಹೋಗಿರುವ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ-150 ಎ ಕಾಮಗಾರಿಗೆ ಎದುರಾಗಿರುವ ಅಡಚಣೆ ಗಳು ಹಾಗೂ ಭೂಸ್ವಾಧೀನ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂ ಚಿಸಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಕಾಮಗಾರಿ ಪ್ರಗತಿ ಪರಿಶೀಲಿಸಿದ ಅವರು,ಈಗಾಗಲೇ 3 ಬಾರಿ ಸಭೆ ನಡೆಸಲಾಗಿದೆ. ಶಾಸಕ ಟಿ.ರ ಘುಮೂರ್ತಿ ಅವರೊಂದಿಗೆ ಸ್ಥಳ ಪರಿಶೀಲನೆಯನ್ನೂ ನಡೆಸಿದ್ದೇನೆ. ಆದರೂ ಈ ಎರಡೂ ತಾಲೂಕುಗಳಲ್ಲಿ ಬಾಕಿ 56 ಕಿ.ಮಿ.ಉದ್ದದ ಕಾ ಮಗಾರಿ ಅನುಷ್ಠಾನದಲ್ಲಿ ಕಿಂಚಿತ್ತೂ ಪ್ರಗತಿಯಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು,2 ತಿಂಗಳ ಒಳಗೆ ಕಾಮಗಾರಿ ಪೂ ರ್ಣಗೊಳಿಸುವಂತೆ ತಾಕೀತು ಮಾಡಿದರು.
ಸರ್ಕಾರಿ ಜಮೀನನ್ನು ಅಕ್ರಮವಾಗಿ ಬೇರೆಯವರ ಹೆಸರಲ್ಲಿ ಇ-ಸ್ವತ್ತು ಮಾಡುವುದರೊಂದಿಗೆ ಭೂಸ್ವಾಧೀನ ಸಂದರ್ಭದಲ್ಲಿ ಪರಿಹಾರ ಮೊತ್ತವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಗುತ್ತಿಗೆ ಕಂಪನಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಪಿಟಿಸಿಎಲ್ ಅಡಿ ಮಂ ಜೂರಾಗಿರುವ ಜಮೀನಲ್ಲಿ ಮಣ್ಣನ್ನು ಎತ್ತಿ ಕಾಮಗಾರಿಗೆ ಬಳಸಲಾಗಿದೆ.
ಇದಕ್ಕೆ ರಾಜಧನವನ್ನೂ ಪಾವತಿಸಿಲ್ಲವೆಂಬ ದೂರುಗಳಿದ್ದು,ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದ್ದು,ಯಾರೇ ತಪ್ಪು ಮಾಡಿದ್ದರೂ ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಿ,ನಿರ್ದ್ಯಾಕ್ಷಿಣ್ಯವಾಗಿ ಕ್ರ ಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿ ದರು.
ಕಟ್ಟಡ,ಭೂ ಪರಿವರ್ತನೆ ಆಗಿದ್ದ ಜಮೀನಿಗೂ,ಕೃಷಿ ಜಮೀನು ಎಂದು ಹಾಗೂ ಅಲ್ಲಿರುವ ಕಟ್ಟಡಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಪರಿ ಹಾರ ಕೊಡಲಾಗಿದೆ ಎಂಬ ದೂರುಗಳಿವೆ. ಆಗಿರುವ ಅಕ್ರಮಗಳ ಪರಿಶೀಲನೆ ನಡೆಯುತ್ತಿದ್ದು ಕೆಲವರು ಜೈಲಿಗೆ ಹೋಗ ಬೇಕಾದೀತು ಎಂದು ಡಿಸಿ ಎಚ್ಚರಿಸಿದರು.
ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಚಿವರು ಡಿಸಿಗೆ ಸೂಚಿಸಿದರು.ಹಿರಿಯೂ ರಲ್ಲಿ 2 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಆಗದಂತೆ ಹಿರಿಯೂರಲ್ಲಿ ಬಟರ್‌ಪ್ಲೈ ಜಂಕ್ಷನ್ ನಿರ್ಮಿಸುವಂತೆ ಹಾಗೂ ಸೋಮೇನಹಳ್ಳಿ ಬಳಿ ಹೊಸದಾಗಿ 500 ಮೀಟರ್ ಉದ್ದದ ಚಾನೆಲ್ ನಿರ್ಮಿಸುವಂತೆ ರಾ.ಹೆ.ಅಧಿಕಾರಿಗಳಿಗೆ ಸೂಚಿಸಿದರು.
ರಾ.ಹೆ.ಪ್ರಾಧಿಕಾರದ ಯೋಜನಾ ನಿರ್ದೇಶಕ ಎಂ.ಶಿವಕುಮಾರ್,ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟೇಶ್‌ನಾಯ್ಕ,ಹಿರಿಯೂ ರು ತಹಸೀಲ್ದಾರ್ ರಾಜೇಶ್ ಮತ್ತಿತರ ಅಧಿಕಾರಿಗಳು,ಗುತ್ತಿಗೆ ಕಂಪನಿ ಪ್ರತಿನಿಧಿಗಳು ಇದ್ದರು.