ರಾಷ್ಟ್ರೀಯ ಸೇವಾ ಯೋಜನೆ ಗರಡಿ ಮನೆ ಇದ್ದಂತೆ

25blrp1
Published on

ಬೇಲೂರು: ಮಹಾತ್ಮ ಗಾಂಧಿಯವರ ಆಶಯದಂತೆ ಪರಿಶ್ರಮ ಮತ್ತು ಅನುಭವಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಗರಡಿ ಮನೆ ಇದ್ದಂತೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಸಿ.ಎಚ್. ಲೋಕೇಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಸಂಸ್ಥಾಪನಾ ದಿನಾಚರಣೆ ಆಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿತ್ವ ವಿಕಸನ, ಸಮಾಜಮುಖಿ ಚಿಂತನೆಗೆ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ. 1969ರಲ್ಲಿ ಪ್ರಾರಂಭವಾದ ಘಟಕವು ಅಸಂಖ್ಯಾತ ಯುವಕರಿಗೆ ಸ್ಫೂರ್ತಿಯಾಗಿದೆ. ಬೇಲೂರಿನ ಕಾಲೇಜಿನಲ್ಲಿ ನಡೆಯುವ ಪ್ರತಿ ಶಿಬಿರಗಳು ಅರ್ಥಪೂರ್ಣ ಹಾಗೂ ಮೌಲ್ಯಾಯುತವಾಗಿದ್ದು, ಇಲ್ಲಿ ಕಲಿತವರು ತಮ್ಮ ಜೀವನದಲ್ಲಿಯೂ ಉತ್ತಮ ಸಾಧನೆ ಮಾಡುವುದಕ್ಕೆ ಸಾಧ್ಯ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹರೀಶ್, ಕಸಾಪ ಮಾಜಿ ಗೌ.ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಲಕ್ಷ್ಮೀನಾರಾಯಣ, ಉಪನ್ಯಾಸಕರಾದ ಸರ್ವಮಂಗಳಾ, ಯೋಗೀಶ್, ವೇದಾವತಿ, ಸಾಧಿಕ್, ದೇದೀಪ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net