ರಾಷ್ಟ್ರೀಯ ಸೇವಾ ಕಾರ್ಯಕರ್ತ: ಅರ್ಜಿ ಆಹ್ವಾನ

1600x960_1118891-nyks
Published on

ಬೀದರ್: ಇಲ್ಲಿಯ ನೆಹರೂ ಯುವ ಕೇಂದ್ರವು ರಾಷ್ಟ್ರೀಯ ಸೇವಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸಲು ಜಿಲ್ಲೆಯ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯಗಳ ಮೂಲಕ ಯುವ ನಾಯಕರಾಗಿ ಹೊರಹೊಮ್ಮಿ, ದೇಶಕ್ಕೆ ಕೊಡುಗೆ ನೀಡ ಬಯಸುವ 18 ರಿಂದ 29 ವರ್ಷದ ಒಳಗಿನ ಯುವ ಜನರು ಅರ್ಜಿ ಸಲ್ಲಿಸಬಹುದು ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ತಿಳಿಸಿದ್ದಾರೆ.
ಆಯ್ಕೆಯಾದವರಿಗೆ ಆರೋಗ್ಯ, ಸಾಕ್ಷರತೆ, ನೈರ್ಮಲ್ಯ, ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ ಎಂದು ಹೇಳಿದ್ದಾರೆ.
ಯೋಜನೆಯಡಿ ಆಯ್ಕೆಯಾದವರಿಗೆ ಮಾಸಿಕ ರೂ. 5 ಸಾವಿರ ಗೌರವ ಧನ ಸಿಗಲಿದೆ. ನೆಹರೂ ಯವ ಕೇಂದ್ರದ ವೆಬ್‍ಸೈಟ್ www.nyks.nic.in ನಲ್ಲಿ ಯೋಜನೆಯ ಮಾಹಿತಿ ಪಡೆದು, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವವರನ್ನು ಹೊರತುಪಡಿಸಿ ಅರ್ಹರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಮಾ. 9 ಕೊನೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ನಗರದ ಮೈಲೂರಿನ ಬಿಲಾಲ್ ಮಸೀದಿ ಹತ್ತಿರದ ಶಾಸ್ತ್ರೀನಗರದ ನಾಗಪ್ಪ ಗಿರಣಿ ಎದುರುಗಡೆ ಇರುವ ನೆಹರೂ ಯುವ ಕೇಂದ್ರದ ಕಚೇರಿಗೆ ಖುದ್ದು ಭೇಟಿ ನೀಡಬಹುದು. ಇಲ್ಲವೇ ಮೊಬೈಲ್ ಸಂಖ್ಯೆ 9004315246 ಅಥವಾ ದೂರವಾಣಿ ಸಂಖ್ಯೆ 08482-235360 ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net