

ವಿಜಯಪುರ: ನಗರದ ಎಸ್ಬಿ ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಫೆ. 21 ಮತ್ತು ಫೆ.22 ರಂದು ಎರಡು ದಿನ ಜೈವಿಕ ವಿಜ್ಞಾನದ ಗಡಿಗಳು : ಸಂಶೋಧನೆ, ನಾವೀನ್ಯತೆ ಮತ್ತು ಸಹಯೋಗದ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಮಹಾವಿದ್ಯಾಲಯದ ಸಸ್ಯಶಾಸ ವಿಭಾಗ, ಕಲಬುರಗಿಯ ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯ ಹಾಗೂ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಸಮ್ಮೇಳನ ಆಯೋಜಿಲಾಗಿದೆ.
ಫೆ. 21 ರಂದು ಬೆಳಗ್ಗೆ 10ಕ್ಕೆ ಹಿಟ್ನಳ್ಳಿ ಕೃಷಿ ವಿವಿ ಡೀನ್ ಡಾ. ಅಶೋಕ ಸಜ್ಜನ ಕಾರ್ಯಕ್ರಮ ಉದ್ಘಾಟಿಸುವರು. ಬಿಎಲ್ಡಿಇ ಸಂಸ್ಥೆಯ ಪ್ರೊ. ವೈ.ಎಂ. ಜಯರಾಜ್ ಅಧ್ಯಕ್ಷತೆ ವಹಿಸುವರು. ಡಾ. ರಾವೇಂದ್ರ ಕುಲಕರ್ಣಿ, ಪ್ರೊ. ವಿ.ಎಸ್. ಬಗಲಿ ಆಗಮಿಸುವರು. ಐಕ್ಯೂಎಸಿ ನಿರ್ದೇಶಕ ಡಾ. ಪಿ.ಎಸ್. ಪಾಟೀಲ, ಡಾ. ಸಯ್ಯದ್ ಅಬ್ರಾರ್ ಹಾಗೂ ಡಾ. ರಾಮಚಂದ್ರ ನಾಯಕ್ ಎಂ., ಉಪಸ್ಥಿತಿತರಿರುವರು.
ಫೆ. 22 ರಂದು ಸಂಜೆ 4ಕ್ಕೆ ಅತಿಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ನಡಯಲಿದ್ದು, ಡಾ. ನಿಶಾಂತ ಆರಿಫ್ ಹುಸೇನ್ ಭಾಗವಹಿಸುವರು ಎಂದು ಮಹಾವಿದ್ಯಾಲಯದ ಪ್ರಾಚಾಯೆರ್ ಡಾ. ಆರ್.ಎಂ. ಮಿರ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.