

ಚಿತ್ರದುರ್ಗ: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಒತ್ತಾಯಿಸಿ ಬಿಜೆಪಿ ರಾಜ್ಯಾದ್ಯಂತ ಒಂದು ಕೋಟಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಜನರ ಉಜ್ವಲ ಭವಿಷ್ಯಕ್ಕಾಗಿ ಕೇಂದ್ರ ರೂಪಿಸಿರುವ ಎನ್‌ಇಪಿಯನ್ನು ಮೊದಲ ಬಾರಿಗೆ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಮುಂದಾಗಿತ್ತು. ಆದರೆ ಈಗ ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ನೇತೃ ತ್ವದ ಕಾಂಗ್ರೆಸ್ ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ.
ಎನ್‌ಇಪಿ ಬದಲು ಹೊಸದಾಗಿ ರಾಜ್ಯಶಿಕ್ಷಣ ನೀತಿ ರೂಪಿಸಲು ಪ್ರೊ.ಸುಖದೇವ್‌ಥೋರಾಟ್ ಅಧ್ಯಕ್ಷತೆಯಲ್ಲಿ 15 ಸದಸ್ಯರ ಹೊಸ ಸಮಿತಿ ರ ಚಿಸಿದೆ. ಮೆಕಾಲೆ ಶಿಕ್ಷಣ ನೀತಿ ಬದಲು, ಯುವ ಜನರ ಸಮಗ್ರ ಏಳಿಗೆಗಾಗಿ ರೂಪಿಸಿರುವ ಹೊಸ ಶಿಕ್ಷಣ ನೀತಿಯಿಂದ ವಿಶೇಷವಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ರಾಜ್ಯದ ಶಿಕ್ಷಣ ನೀತಿ ರೂಪಿಸಲು ಹೊಸದಿಲ್ಲಿಯ ಥೋರಾಟ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಸಮಿತಿ ಸದಸ್ಯರಲ್ಲಿ ಕೆಲವರು ವಿವಾದದಲ್ಲಿ ಸುಳಿಯಲ್ಲಿ ಸಿಲುಕಿದ್ದಾರೆ. ರಾಜಕೀಯ ಕಾರಣಕ್ಕಾಗಿ ಮಕ್ಕಳ ಭವಿಷ್ಯ ಹಾಳುಗೆಡುವುದು ಎಷ್ಟರ ಮಟ್ಟಿಗೆ ಸರಿ? ಮತ್ತೆ ಎನ್‌ಇಪಿ ಜಾರಿಗೆ ಒತ್ತಾ ಯಿಸಿ ರಾಜ್ಯಾದ್ಯಂತ ಬಿಜೆಪಿ, ಎಬಿವಿಪಿ ಹಾಗೂ ಪರಿವಾರದ ಸಂಘಟನೆಗಳಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ.
ನ.15ರಿಂದ 30ರವರೆಗೆ ಅಭಿಯಾನ ನಡೆಯಲಿದೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮಠಾಧೀಶರ ಬೆಂಬಲವೂ ನಮ್ಮ ಈ ಹೋರಾಟಕ್ಕೆ ಇದೆ. ತಮ್ಮ ಮೇಲೆ ಎಂಥದ್ದೇ ಒತ್ತಡವಿದ್ದರೂ ಎನ್‌ಇಪಿ ಜಾರಿಗೊಳಿಸುವಂತೆ ಸಿಎಂಗೆ ಮನವಿ ಮಾಡಿದ ನವೀನ್,ಬೇಡಿಕೆಗೆ ಸ್ಪಂದಿಸದಿದ್ದರೆ ರಾಜ್ಯದಲ್ಲಿ ಬೃಹತ್ ಜನಾಂದೋಲನ ರೂಪಿಸಲಾಗುವುದೆಂದು ಎಚ್ಚರಿಸಿದರು.
ಸಂವಿಧಾನ ವಿರೋಧಿ ನಿಲುವು
ವಿಧಾನಸಭೆ ಸ್ಪೀಕರ್ ಸ್ಥಾನದ ಕುರಿತಂತೆ ದುರಂಹಕಾರದ ಹೇಳಿಕೆ ನೀಡುವ ಮೂಲಕ ಸಚಿವ ಜಮೀರ್‌ಅಹಮದ್‌ಖಾನ್ ಅವರು, ಡಾ.ಬಾಬಾ ಸಾಹೇಬ್ ರಚಿತ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ಸಚಿವರ ಹೇಳಿಕೆ ಕಾಂಗ್ರೆಸ್ ಮನಸ್ಥಿತಿ ಬಿಂಬಿಸುತ್ತಿದೆ. ಸಚಿವರ ಹೇಳಿಕೆ ಖಂಡಿಸಿ ಬಿಜೆಪಿ ಎರಡೂ ಸದನಗಳಲ್ಲಿ ಹೋರಾಟ ನಡೆಸಲಿದೆ. ಸ್ಪೀಕರ್ ಹುದ್ದೆ ಕುರಿತ ತಮ್ಮ ಹೇಳಿಕೆಗೆ ಸಚಿವರು ಕ್ಷಮೆಯಾಚಿಸ ಬೇ ಕೆಂದು ಆಗ್ರಹಿಸಿದರು.
ಬ್ಯಾಕ್‌ಸೀಟ್ ಡ್ರೈವರ್
ಮಾಜಿ ಶಾಸಕ, ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು, ಛಾಯಾ ಮುಖ್ಯಮಂತ್ರಿ ಎಂಬ ಆರೋಪಕ್ಕೆ ಪುಷ್ಠಿ ಸಿಕ್ಕಿದೆ. ಯತ್ರೀಂದ್ರ ಸರ್ಕಾರದ ಬ್ಯಾಕ್‌ಸೀಟ್ ಡ್ರೈವರ್. ಸಿದ್ದರಾಮಯ್ಯ ಪುತ್ರನ ಮೂಲಕ ವರ್ಗಾವಣೆ ದಂಧೆ ನಡೆಸಿದ್ದಾರೆ. ರಾಜ್ಯದಲ್ಲಿ ಯತೀಂದ್ರ ಆಡಳಿತವಿದೆ ಎಂದು ಆರೋಪಿಸಿದರು. ಪಕ್ಷದ ಮುಖಂಡರಾದ ಸಂಪತ್, ನವೀನ್‌ಚಾಲುಕ್ಯ, ನಾಗರಾಜ್ ಬೇದ್ರೆ, ಶಿವಣ್ಣಾಚಾರ್ ಇದ್ದರು.
(ಸಿಟಿಡಿ 18 ಕೆ.ಎಸ್.ನವೀನ್)