ರಾಷ್ಟ್ರೀಯ ವಿಜ್ಞಾನ, ಗಣಿತ ದಿನಾಚರಣೆ

9 gkp 01
Published on

ಗೋಣಿಕೊಪ್ಪ: ರಾಷ್ಟ್ರೀಯ ವಿಜ್ಞಾನ, ಗಣಿತ ದಿನಾಚರಣೆಯನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ಗುರುವಾರ ವಿವಿದ ಸ್ಪರ್ಧೆಗಳು ನಡೆದವು.

ತಾಲೂಕಿನ 17 ಶಾಲೆಗಳಿಂದ 122 ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ರಸಪ್ರಶ್ನೆ, ವಿಜ್ಞಾನ ಮಾದರಿ ತಯಾರಿಕೆ, ವಿಜ್ಞಾನ ಮತ್ತು ಗಣಿತ ರಂಗೋಲಿ, ಕಳೆಯುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ಗಣಿತ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಕೆ.ಪಿ.ಎಸ್ ಶಾಲೆಯ ತೇಜಸ್ವಿ ಭಟ್-ಶ್ರಾವ್ಯ ತಂಡ ಪ್ರಥಮ, ವಿರಾಜಪೇಟೆ ಜೂನಿಯರ್ ಕಾಲೇಜು ಪುಷ್ಕಲ್‌ಕುಮಾರ್- ರೂಪಾ ತಂಡ ದ್ವಿತೀಯ, ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಕೆಪಿಎಸ್ ಶಾಲೆಯ ಜಿಷ್ಣುಕುಮಾರ್- ಪ್ರವೀಣ್‌ಕುಮಾರ್ ಪ್ರಥಮ, ಚೆನ್ನಯ್ಯನಕೋಟೆ ಸರ್ಕಾರಿ ಪ್ರೌಢಶಾಲೆಯ ಚಿತ್ರಾ, ಅಕ್ಷರ-ದ್ವಿತೀಯ, ರಂಗೋಲಿ ಸ್ಪರ್ಧೆಯಲ್ಲಿ ಬಿಳಗುಂದ ಸರ್ಕಾರಿ ಪ್ರೌಢಶಾಲೆ ರೈಯನ- ಸಲೀಮ ಪ್ರಥಮ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಅಜಯ್ - ಶಶಾಂಕ್ ದ್ವಿತೀಯ, ಕಳೆಯುವ ಸ್ಪರ್ಧೆಯಲ್ಲಿ ಪೊನ್ನಪ್ಪಸಂತೆ ಎಂಸಿಎಸ್ ಶಾಲೆಯ ಮದೀಹ, ದೇವಣಗೇರಿ ಬಿಸಿ ಪ್ರೌಢಶಾಲೆಯ ಸೋಫಾ ಫಾತಿಮ ಪ್ರಥಮ, ಬಿಸಿ ಪ್ರೌಢಶಾಲೆಯ ಎಚ್. ಜೆ. ಅರುಣ, ಬಾಳೆಲೆ ವಿಜಯಲಕ್ಮಿ ಪ್ರೌಢಶಾಲೆಯ ನಾಗರಾಜು ದ್ವಿತೀಯ ಸ್ಥಾನ ಪಡೆದರು.

ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ೀಶೈಲ ಬೀಳಗಿ ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಖಜಾಂಜಿ ಡಾ. ಕೆ. ಎನ್.ಚಂದ್ರಶೇಖರ್, ಶಿಕ್ಷಣ ವಿಭಾಗದ ಯೋಜನಾ ನಿರ್ದೇಶಕ ಅವಿತ್ ಆನಂದರಾಜು, ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ, ಕ್ಷೇತ್ರ ಸಂಪನ್ಮೂಲ ಸಮನ್ವಯ ವ್ಯಕ್ತಿ ಪುಷ್ಪ, ಕೆಪಿಎಸ್ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶರೀನ್, ಉಪ ಪ್ರಾಂಶುಪಾಲ ಎಂ.ಯು ಚೆಂಗಪ್ಪ, ವಿದ್ಯಾರ್ಥಿ ಪ್ರತಿನಿಧಿ ಬಬಿತ, ಅಮೃತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net