ರಾಷ್ಟ್ರೀಯ ವಿಚಾರ ಸಂಕಿರಣ ನ.5, 6ರಂದು

Shashil Namoshi
Published on

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವೀರಮ್ಮ ಗಂಗಶ್ರೀ ಮಹಿಳಾ ಕಾಲೇಜಿನಿಂದ `ಕೃತಕ ಬುದ್ದಿಮತ್ತೆ ಮತ್ತು ಸಮಾಜ, ಸಾಮಾಜಿಕ ಜಾಲತಾಣಗಳು ಮತ್ತು ಸಮಾಜ' ವಿಷಯ ಕುರಿತು ಎರಡು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನ.೫, ೬ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಚ್‌ಕೆಇ ಸಂಸ್ಥೆ ಅಧ್ಯಕ್ಷ, ಎಂಎಲ್ಸಿ ಶಶೀಲ್ ನಮೋಶಿ ತಿಳಿಸಿದರು.

ಹೈದರಾಬಾದ್‌ನ ಐಸಿಎಸ್‌ಎಸ್‌ಆರ್, ಎಸ್‌ಆರ್‌ಸಿ ಹಾಗೂ ಕೇಂದ್ರ ಸರ್ಕಾರದ ಎಂಎಚ್‌ಆರ್‌ಡಿ ಇಲಾಖೆ ಸಹಯೋಗದಲ್ಲಿ ರಾಷ್ಟçಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ನ.೫ರಂದು ಪಿಡಿಎ ಕಾಲೇಜಿನ ಸ್ಯಾಕ್ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ. ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಗುಜರಾತ್ ಕೇಂದ್ರೀಯ ವಿವಿ ನಿವೃತ್ತ ಕುಲಸಚಿವ ಪ್ರೊ.ಎಸ್.ಎಲ್ ಹಿರೇಮಠ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ ೧೨.೩೦ಕ್ಕೆ ಮೊದಲ ಗೋಷ್ಠಿಯಲ್ಲಿ ಕೃತಕ ಬುದ್ದಿಮತ್ತೆ ಮತ್ತು ಸಮಾಜ ವಿಷಯದ ಬಗ್ಗೆ ಪ್ರೊ.ಮಧುಸುದನ್ ಜೆ.ವಿ., ಡಾ.ಕೆ.ಎಂ.ಜಿಯಾವುದ್ದೀನ್, ಪ್ರೊ.ಶ್ರೀದೇವಿ ಸೋಮಾ, ಡಾ.ಎ.ಜಿ.ಖಾನ್ ವಿಷಯ ಮಂಡಿಸಲಿದ್ದಾರೆ ಎಂದರು.

ನ.೬ರAದು ನಡೆಯಲಿರುವ ೨ನೇ ಗೋಷ್ಠಿಯಲ್ಲಿ `ಸಾಮಾಜಿಕ ಜಾಲತಾಣಗಳು ಮತ್ತು ಸಮಾಜ' ವಿಷಯದ ಕುರಿತು ಪ್ರೊ.ಸುಧಾ ಖೋಕಟೆ, ಪ್ರೊ.ಚಂದ್ರಶೇಖರ ಎಸ್., ಹಿರಿಯ ಪತ್ರಕರ್ತ ಮನೋಜ ಗುದ್ದಿ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ ೨ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.

ವಿಚಾರ ಸಂಕಿರಣದಲ್ಲಿ ಪಾಲೊಳ್ಳಲು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ ಮತ್ತು ಉತ್ತರಾಖಂಡ ರಾಜ್ಯಗಳಿಂದ ೧೪೭ ಜನ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊAಡಿz್ದÁರೆ. ಸುಮಾರು ೨೫೦ಕ್ಕೂ ಹೆಚ್ಚು ಡೆಲಿಗೆಟ್ಸ್ ಭಾಗವಹಿಸಲಿದ್ದಾರೆ. ಸಂಸ್ಥೆಯ ಡಾ.ಎಸ್.ಆರ್.ಹರವಾಳ, ಡಾ.ರಾಜೇಂದ್ರ ಕೊಂಡಾ, ಡಾ.ಮಹೇಶ ಗಂವಾರ್, ಐ.ಕೆ.ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net