ರಾಷ್ಟ್ರೀಯ ವಿಚಾರ ಸಂಕಿರಣ ನಾಳೆ

DR.SHARANABASAVAPPA APPA (GLB)1 (2)
Published on

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯ ಸಹಯೋಗದಲ್ಲಿ ಎಸ್ಬಿಯು ಕುಲಾಧಿಪತಿಗಳಾದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ, ಡಾ. ದಾಕ್ಷಾಯಿಣಿ ಅವ್ವ ಮತ್ತು ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪ ಅವರ ಹುಟ್ಟುಹಬ್ಬವನ್ನು ಮಾದರಿಯಾಗಿ ಮತ್ತು ಭವ್ಯವಾಗಿ ಆಚರಿಸುವ ಉದ್ದೇಶದಿಂದ ನ.8ರಿಂದ 13ವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ವೆಬ್ನಾರ್ ಹಾಗೂ ಸಮಾರೋಪದಂದು ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ವಿವಿಧ ಕ್ಷೇತ್ರಗಳಲ್ಲಿ ಡಾ. ಅಪ್ಪಾಜಿ ಮಾಡಿದ ಸಾಧನೆ ಹಾಗೂ ಕೊಡುಗೆ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಡಾ. ಶರಬಸವಪ್ಪ ಅಪ್ಪ ಅವರ 86ನೇ ಜನ್ಮದಿನ 14ರಂದು, ಮಾತೋಶ್ರೀ ಡಾ. ದಾಕ್ಷಾಯಿಣಿಯವರ ಜನ್ಮದಿನ 22 ರಂದು ಹಾಗೂ ಚಿ.ದೊಡ್ಡಪ್ಪ ಅಪ್ಪಾರವರ ಜನ್ಮದಿನ 1ರಂದು ಆಚರಿಸಲಾಗುತ್ತಿತ್ತು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳು ಪತ್ರಿವರ್ಷ ಕಾಯರ್ಾಗಾರ, ವಿಚಾರಸಂಕಿರಣ ಮುಂತಾದವುಗಳು ಆಯೋಜಿಸುವ ಮೂಲಕ ನವೆಂಬರ್ ತಿಂಗಳಾದ್ಯಂತ ಮೂವರ ಜನ್ಮದಿನ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಕರೊನಾ ಮತ್ತು ಪ್ರವಾಹ ಹಾವಳಿಯಿಂದಾಗಿ ವಿಭಿನ್ನವಾಗಿ ಆಯೊಜಿಸಲಾಗಿದೆ.
ಪ್ರಚಲಿತದಲ್ಲಿರುವ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಪ್ರವಾಹ ಪೀಡಿತ ಜನರ ಸಂಕಷ್ಟ ಕಂಡು ಡಾ. ಅಪ್ಪಾಜಿ ಮತ್ತು ಡಾ.ಅವ್ವಾಜಿ ಅವರು ಜನ್ಮ ದಿನ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದರು.
ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂವರ ಜನ್ಮದಿನ ನಿಮಿತ್ತ ನ.8 ರಿಂದ 13 ರವರೆಗೆ ವಿವಿಧ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ವೆಬ್ನಾರ್ಗಳನ್ನು ಆಯೋಜಿಸುವ ತೀಮರ್ಾನಿಸಲಾಗಿದೆ. 13 ರಂದು ಮಹತ್ವದ ಕೃತಿಗಳಾದ ಡಾ.ಶಿವರಾಜ ಶಾಸ್ತ್ರಿ ಹೆರೂರ ಅವರ ಶ್ರೀಶರಣಬಸವ ಮಹಾದಾಸೋಹ ದರ್ಶನಂ ಮಹಾಕಾವ್ಯ ಮತ್ತು ಡಾ. ನೀಲಾಂಬಿಕಾ ಶೇರಿಕಾರ ಅವರ ಮಹಾಪ್ರಸಾದಿ, ಈ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸಗಳನ್ನು ನಡೆಸಲಾಗುತ್ತದೆ ಎಂದು ದೇಶಮುಖ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net