

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಶುಕ್ರವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಅವರು ನ್ಯಾಯಾಂಗ ಸಂಧಾನಕಾರರಾಗಿ ಮತ್ತು ಸ್ಥಳೀಯ ವಕೀಲ ಎಂ.ಬಿ. ಬೆಂತೂರ ಅವರು ಸಂಧಾನಕಾರರಾಗಿ ಕಾರ್ಯನಿರ್ವಹಿಸಿದರು. ಲೋಕ್ ಅದಾಲತ್‌ನಲ್ಲಿ 4 ದೂರು ಪ್ರಕರಣಗಳು ಮತ್ತು 4 ನೋಟಿಸ್ (ಅಮಲಜಾರಿ) ಪ್ರಕರಣಗಳು ರಾಜಿಯಾಗಿ ಇತ್ಯರ್ಥವಾದವು. ಲೋಕ ಅದಾಲತ್‌ನಲ್ಲಿ ಗ್ರಾಹಕರಿಗೆ 27,82,673 ರೂಪಾಯಿ ಪರಿಹಾರ ನೀಡಲಾಯಿತು.