ರಾಷ್ಟ್ರೀಯ ಭಾವೈಕ್ಯತಾ ಶಿಬಿರ 22ರಿಂದ

19 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜನತಾ ಶಿಕ್ಷಣ ಸಮಿತಿಯ ಕೆ.ಎಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಯೋಗದಲ್ಲಿ ಫೆ. 22ರಿಂದ 28ರವರೆಗೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಏರ್ಪಡಿಸಲಾಗಿದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರದಲ್ಲಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳ 50 ಸ್ವಯಂ ಸೇವಕರು ಹಾಗೂ ಕರ್ನಾಟಕದ ಒಟ್ಟು 18 ವಿಶ್ವ ವಿದ್ಯಾಲಯ, ನಿರ್ದೇಶನಾಲಯಗಳ 100 ಎನ್‌ಎಸ್‌ಎಸ್ ಸ್ವಯಂ ಸೇವಕರು, ಕಾರ್ಯಕ್ರಮ ಅಧಿಕಾರಿಗಳು ಸೇರಿ 150 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಜೆಎಸ್‌ಎಸ್ ಆವರಣದಲ್ಲೇ ಪ್ರತಿನಿಧಿಗಳಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮಹಾವೀರ ಉಪಾಧ್ಯೆ ಮಾತನಾಡಿ, ಫೆ. 22ರಂದು ಸಂಜೆ 4 ಗಂಟೆಗೆ ಜೆಎಸ್‌ಎಸ್ ಉತ್ಸವ ಹಾಲ್‌ನಲ್ಲಿ ಡಾ. ಅಜಿತ ಪ್ರಸಾದ ಉದ್ಘಾಟಿಸುವರು. ಅತಿಥಿಗಳಾಗಿ ಕರ್ನಲ್ ವಿವೇಕ ಅಳಗವಾಡಿ, ಡಾ. ದಾಕ್ಷಾಯಿಣಿ ರಾಮನಗೌಡರ, ಪ್ರದೀಪ ಪಿ., ರವಿಚಂದ್ರನ್ ಎನ್., ಕೆ.ವಿ. ಖಾದ್ರಿ ನರಸಿಂಹಯ್ಯ, ಪ್ರತಾಪ ಲಿಂಗಯ್ಯ, ಡಾ. ಗುರುಪ್ರಸಾದ ಹೂಗಾರ, ಡಾ. ಎಂ.ಬಿ. ದಳಪತಿ ಆಗಮಿಸಲಿದ್ದಾರೆ. ವಸಂತ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಫೆ. 28ರಂದು ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ವಕೀಲ ಅರುಣ ಜೋಶಿ, ಕವಿತಾ ಮಿಶ್ರಾ, ವೈ.ಎಂ. ಉಪ್ಪಿನ, ಡಾ. ಗುರುಪ್ರಸಾದ ಹೂಗಾರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರತಿನಿಧಿಗಳಿಗೆ ಈ ಭಾಗದ ಸಂಸ್ಕೃತಿ ತಿಳಿಸುವ ನಿಟ್ಟಿನಲ್ಲಿ ಫೆ. 25ರಂದು ಹಾವೇರಿ ಜಿಲ್ಲೆ ಗೊಟಗೋಡಿ ಉತ್ಸವ ರಾಕ್ ಗಾರ್ಡನ್, ಜಾನಪದ ವಿಶ್ವ ವಿದ್ಯಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಕರೆದೊಯ್ಯಲಾಗುವುದು ಎಂದರು.
ಆಹಾರ ಕಲಬೆರಕೆ, ಸಿರಿಧಾನ್ಯ ಕುರಿತು ದಿನೇಶ ಎಂ., ಆರ್.ಕೆ. ಮೊನೆ, ಯೋಗ, ಆಯುರ್ವೇದ ಕುರಿತು ಡಾ. ತಿರುಮುರುಗನ ಸೆಲ್ವರಾಜ್, ದೇಸಿ ಕ್ರೀಡೆಗಳ ಕುರಿತು ರಶ್ಮಿ ಎಸ್, ಮಾನವ ಕಂಪ್ಯೂಟರ್ ಕುರಿತು ಬಸವರಾಜ ಉಮರಾಣಿ ಸೇರಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಾಗುವುದು. ಶಿಬಿರದ ಕೊನೇ ದಿನ ಪ್ರತಿನಿಧಿಗಳಿಂದ ಅನ್ನ, ನೀರು ಮತ್ತು ವಿದ್ಯುತ್ ಪೋಲು ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಲಾಗುವುದು ಎಂದರು.
ವಸಂತ ದೇಸಾಯಿ, ವಿ.ಕೆ. ಭರಣಿ, ಈರಪ್ಪ ಪತ್ತಾರ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net