ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ದಿಯಾ

23 gkp 01 diya
Published on

ಗೋಣಿಕೊಪ್ಪ: ಒಡಿಸ್ಸಾದ ಭುವನೇಶ್ವರದಲ್ಲಿ ಡಿ.26ರಿಂದ ನಡೆಯಲಿರುವ 34ನೇ ಸಬ್ ಜೂನಿಯರ್ ಯೋನೆಕ್ಸ್ ಸನ್‌ರೈಸ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಜಿಲ್ಲೆಯ ಬೊಪ್ಪಂಡ ದಿಯಾ ಭೀಮಯ್ಯ ಆಯ್ಕೆಯಾಗಿದ್ದಾರೆ. ದಿಯಾ ರಾಜ್ಯದ ಪ್ರಥಮ ಶ್ರೇಯಾಂಕಿತ ಆಟಗಾರ್ತಿಯಾಗಿದ್ದು, 15 ವರ್ಷದೊಳಗಿನ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮೈಸೂರು ಪ್ರಗತಿ ಎಲೈಟ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಇವರು ಮಡಿಕೇರಿಯ ಬೊಪ್ಪಂಡ ಕುಸುಮ, ಭೀಮಯ್ಯ ದಂಪತಿ ಪುತ್ರಿ. ಮೈಸೂರಿನ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಮೇದುರ ಅರುಣ್ ಪೆಮ್ಮಯ್ಯ ಹಾಗೂ ಬಿ.ಪಿ.ಭೀಮಯ್ಯ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net