ರಾಷ್ಟ್ರೀಯ ಪ್ರಜ್ಞೆ ಬೆಳೆಸುವಂತಾಗಲಿ ರಕ್ಷಾ ಬಂಧನ

30 vikram 8
Published on

ಧಾರವಾಡ: ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಎಲ್ಲರೂ ಸಹೋದರರಂತೆ ಪರಸ್ಪರ ಸಾಮರಸ್ಯದಿಂದ ಜೀವಿಸಿದರೆ ದೇಶ ಅಭಿವೃದ್ಧಿಯಾಗುವುದು. ರಕ್ಷಾ ಬಂಧನ ಉತ್ಸವದ ಮೂಲಕ ಜಾತಿ, ಮತ, ಭಾಷೆ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬಾಳುವಂತಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಧರ್ಮ ಜಾಗರಣ ಸದಸ್ಯ ರಾಮಚಂದ್ರ ದೇಶಪಾಂಡೆ ಅಭಿಪ್ರಾಯಪಟ್ಟರು.
ನಗರದ ನೀರಲಕಟ್ಟಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ರಕ್ಷಾ ಬಂಧನ ಉತ್ಸವದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನೂ ತನ್ನ ಸಹೋದರ ಸಹೋದರಿಯರೆಂದು ಭಾವಿಸಿ ಮಾತೃ ಸ್ವರೂಪಿಯಾದ ಭಾರತಾಂಬೆಯ ರಕ್ಷಣೆ ಎಲ್ಲರ ಕರ್ತವ್ಯ ಎಂಬ ಭಾವನೆ ಮೂಡಿಸುವ ಹಬ್ಬ ರಕ್ಷಾ ಬಂಧನ. ಈ ಹಬ್ಬ ಸಹೋದರತೆಯ ಮೂಲಕ ರಾಷ್ಟ್ರೀಯ ಪ್ರಜ್ಞೆ, ದೇಶ ಪ್ರೇಮ ಮೂಡಿಸುತ್ತದೆ ಎಂದರು.
ಪ್ರಾಚಾರ್ಯೆ ಡಾ. ಅನಿತಾ ರೈ, ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ, ಇತರರು ಇದ್ದರು. ವೀರರಾಜ ಕೆ. ಸ್ವಾಗತಿಸಿದರು. ಮಂಜುನಾಥ ಲಂಗೋಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net