

ಧಾರವಾಡ: ಜಮ್ಮು ಕಾಶ್ಮೀರದ ಕತ್ರಾದಲ್ಲಿ ಇತ್ತೀಚೆಗೆ ನಡೆದ ನ್ಯಾಷನಲ್ ಡ್ಯಾನ್ಸ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಗರದ ವಿದ್ಯಾ ಪಿ. ಹಂಚಿನಮನಿ ಕಾಲೇಜಿನ ಪಿಯುಸಿ ಪ್ರಥಮ ವಿದ್ಯಾರ್ಥಿನಿ ಮಿನಲ್ ಮಂಜುನಾಥ ದಾಮ್ನೇಕರ ಕಂಚಿನ ಪದಕ ಪಡೆದಿದ್ದಾಳೆ. ಸಂತೋಷ ಪಾಟೀಲ ಮಾರ್ಗದರ್ಶನದಲ್ಲಿ 15ರಿಂದ 17 ವಯೋಮಾನದ ಫ್ರೀಸ್ಟೈಲ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಕಂಚಿನ ಪದಕ ಪಡೆದಿದ್ದಾಳೆ. ನಗರದ ಜೈವ್ ಸ್ಟುಡಿಯೋದ ಹರೀಶ ಕುಂದಗೋಳ ಅವರಿಗೆ ನೃತ್ಯ ಗುರುವಾಗಿದ್ದಾರೆ.