

ಕುಶಾಲನಗರ: ಶ್ರೀನಿವಾಸ ರಾಮಾನುಜನ್ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನವನ್ನು ಜಿಲ್ಲಾ ಶಿಕ್ಷಣ ಫೌಂಡೇಷನ್ ವತಿಯಿಂದ ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು. ಶಾಲಾ ಮಕ್ಕಳಿಗೆ ಗಣಿತ ದಿನದ ಅಂಗವಾಗಿ ಕ್ವಿಜ್ ಹಮ್ಮಿಕೊಳ್ಳಲಾಗಿತ್ತು. ಸರಿಯಾದ ಉತ್ತರ ಹೇಳಿದ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಮುಖ್ಯಶಿಕ್ಷಕಿ ಸಣ್ಣಕ್ಕ ಅಧ್ಯಕ್ಷತೆ ವಹಿಸಿದ್ದರು. ಕೂಡಿಗೆ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ, ಶಿಕ್ಷಣ ಫೌಂಡೇಷನ್ ಸಂಚಾಲಕ ಶಿವಕುಮಾರ್, ಶಾಲಾಭಿವೃದ್ಧಿ ಸಮಿತಿ ನಿರ್ದೇಶಕ ಗಣೇಶ್, ಶಿಕ್ಷಕಿ ಕಮಲ, ಗ್ರಂಥಾಲಯ ಮೇಲ್ವಿಚಾರಕಿ ಕವಿತಾ, ವಸಂತ ಇತರರು ಇದ್ದರು.