

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರೀಯ ಕೈಮಗ್ಗ ದಿನವು ನಮ್ಮ ದೇಶದ ಸಂಸ್ಕೃತಿ ಮತ್ತು ಆರ್ಥಿಕತೆಗೆ ನುರಿತ ಕೈಮಗ್ಗ ನೇಕಾರರ ಕೊಡುಗೆಗಳನ್ನು ನೆನಪಿಸಿ ಅವರನ್ನು ಗೌರವಿಸಲು ಮಹತ್ವ ಪಡೆದುಕೊಂಡಿದೆ ಎಂದು ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಸುನೀಲ ಬಾಗೇವಾಡಿ ಹೇಳಿದರು.
ರಾಷ್ಟ್ರೀಯ ಕೈಮಗ್ಗ ದಿನ ನಿಮಿತ್ತ ನಗರದ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ವತಿಯಿಂದ ಕೃಷಿ ವಿಶ್ವ ವಿದ್ಯಾಲಯದ ಗೃಹ ವಿಜ್ಞಾನ ವಿಭಾಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೈಮಗ್ಗ ನೇಕಾರ ಸಾಧಕರಿಗೆ ಸನ್ಮಾನಿಸಿ ಮಾತನಾಡಿದ ಅವರು, ನಮ್ಮ ಹಿಂದಿನ ಕೈಮಗ್ಗವು ಉದ್ಯಮದ ಮಹತ್ವ ತೋರುತ್ತದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ನೇಕಾರರು ಮಹಿಳೆಯರೇ ಆಗಿರುವುದು ವಿಶೇಷ. ಅವರ ಕಾರ್ಯ ಸ್ಮರಿಸಲು ಇದೊಂದು ಸು ದಿನವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನವಲಗುಂದ ಕೈ ಮಗ್ಗದ ನೇಕಾರರಾದ ಅಕ್ಕಮಹಾದೇವಿ ಬೋಜೇದಾರ ಮತ್ತು ಫರ್ಜಾನಾ ಬೇಗಂ ಸಿರಸಂಗಿ ಅವರನ್ನು ಸನ್ಮಾನಿಸಲಾಯಿತು.
ಗುಲ್ಜನ್‌ಸಿಂಗ್, ಶಿವರೆಡ್ಡಿ ಸೋಮಪುರ, ಶರಯೂ ನಾಯಕ, ಡಾ. ಸಾಧನಾ ಕುಲ್ಲೊಳ್ಳಿ, ಡಾ. ರೇಣುಕಾ ಸಾಳುಂಕೆ, ಆನಂದ ನಾಯಕ, ಡಾ.ವಿ.ಎಸ್. ಪಾಟೀಲ, ಮಾರ್ತಾಂಡಪ್ಪ ಕತ್ತಿ, ಇತರರು ಇದ್ದರು.