

ಕಲಬುರಗಿ: ದಿ ಐಡಿಯಲ್ ಪೈನ್ ಆರ್ಟ್ ಸೊಸೈಟಿ ಮತ್ತು ಬೆಂಗಳೂರಿನ ಚಿತ್ರಾವತ ಆರ್ಟ್ ವಿಷನ ಸಹಯೋಗದಲ್ಲಿ ನಗರದ ಎನ್.ಜಿ.ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಅ.2ರಿಂದ 7ರವರೆಗೆ ರಾಷ್ಟ್ರ ಮಟ್ಟದ ಕಲಾವಿದರ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ರಾಜಶೇಖರ ಪಾಟೀಲ್ ತಿಳಿಸಿದರು.
ಆರು ದಿನದ ಶಿಬಿರದಲ್ಲಿ ರಾಷ್ಟ್ರ ದ ವಿವಿಧೆಡೆಯ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ವಿಶೇಷವಾಗಿ ೧೮ ಕಲಾವಿದರು ಶಿಬಿರದಲ್ಲಿ ಭಾಗವಹಿಸಿ, ಚಿತ್ರಕಲೆ, ಉಪನ್ಯಾಸ, ವಿಷಯ ಮಂಡಲನೆ, ಪ್ರದರ್ಶನ ಸೇರಿ ವಿವಿಧ ವಿಷಯಗಳ ಕುರಿತು ಚಿಂತನ ಮಂಥನ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.೨ರಂದು ಬೆಳಗ್ಗೆ ೧೦.೩೦ಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಉದ್ಘಾಟಿಸಲಿದ್ದು, ಸಾಹಿತಿ ಎಂ.ಜಿ.ಬಿರಾದಾರ ಅತಿಥಿಗಳಾಗಿದ್ದು, ಪ್ರೊ.ವಿ.ಜಿ.ಅಂದಾನಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಎಂ.ಗೀತಾ, ಕೆ.ಎಸ್.ಅಪ್ಪಾಜಯ್ಯ ಭಾಗವಹಿಸಲಿದ್ದಾರೆ ಎಂದರು.
ಅ.೩ರಂದು ಬೆಳಗ್ಗೆ ೧೦.೩೦ಕ್ಕೆ ಪುಣೆಯ ಕಲಾವಿದ ಅಮಿತ್ ಚಂದ್ರಕಾಂತ ಧಾನೆ ಅವರಿಂದ ಚಿತ್ರ ಪ್ರದರ್ಶನ ನಡೆಯಲಿದೆ. ಅ.೪ರಂದು ಬೆಳಗ್ಗೆ ೧೦ಕ್ಕೆ ವಿಷಯ ಮಂಡನೆ ನಡೆಯಲಿದ್ದು, ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಡಾ.ಶಿವಾನಂದ ಭಂಟನೂರ ಮುಖ್ಯ ಅತಿಥಿಗಳಾಗಿದ್ದು, ಅನಿತಾ ರೆಡ್ಡಿ, ಸುರೇಶ ಜಯರಾಂ, ಚಿಂತಾಮಣಿ ಜಿಜಿ, ದತ್ತಾತ್ರೇಯ ಭಟ್ ವಿಷಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಅ.೫ರಂದು ಬೆಳಗ್ಗೆ ೧೦.೩೦ಕ್ಕೆ ಕಲ್ಕತ್ತಾದ ಅನಿರ್ಬನ ಜನಾ ಚಿತ್ರ ಪ್ರದರ್ಶನ ನಡೆಯಲಿದ್ದು, ಸಂಜೆ ೫ಕ್ಕೆ ಬೆಂಗಳೂರಿನ ಅನೀಲಕುಮಾಜಿ ಅವರಿಂದ ಸ್ಲೆÊಡ್ ಶೋ ಪ್ರದರ್ಶನ ನಡೆಯಲಿದೆ. ಅ.೬ರಂದು ಬೆಳಗ್ಗೆ ೧೦.೩೦ಕ್ಕೆ ಪುಣೆಯ ಜೀತೇಂದ್ರ ಗಾಯಕವಾಡರಿಂದ ಚಿತ್ರ ಪ್ರದರ್ಶನ ನಡೆಯಲಿದೆ. ಅ.೭ರಂದು ಮಧ್ಯಾಹ್ನ ೧೨ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಗುವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಸಮಾರೋಪ ಭಾಷಣ ಮಾಡಲಿದ್ದಾರೆ. ಬೆಸ್ಕಾಂ ಮುಖ್ಯ ಅಭಿಯಂತರ ಟಿ.ಎಂ.ಶಿವಪ್ರಕಾಶ, ದೆಹಲಿಯ ಕಲಾವಿದ ಜಿ.ಆರ್.ಈರಣ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರ. ಪ್ರೊ.ವಿ.ಜಿ.ಅಂದಾನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.