ರಾಷ್ಟ್ರೀಕೃತ ಬ್ಯಾಂಕ್​ಗೆ ಸರಿಸಮನಾಗಿ ಸೇವೆ

Capture1
Published on

ಬೀದರ್: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳಿಗೆ ಸರಿಸಮನಾಗಿ ಗ್ರಾಹಕರಿಗೆ ತಂತ್ರಾಂಶ ಆಧಾರಿತ ಸಕಲ ಸೇವೆ ಕಲ್ಪಿಸುವುದೇ ಬ್ಯಾಂಕ್ ಗುರಿಯಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ಬ್ಯಾಂಕ್​ನ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್​ನೆಟ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸೇವೆಗಳಿಂದ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಆಗಲಿದೆ. ಬರುವ ದಿನಗಳಲ್ಲಿ ಯುಪಿಐ, ಐಎಂಪಿಎಸ್, ಬಿಬಿಪಿಎಸ್, ಗೂಗಲ್ ಪೋನ್ ಪೇ ಮೊದಲಾದ ಸೇವೆ ಒದಗಿಸಲು ಯೋಜಿಸಲಾಗಿದೆ ಎಂದರು.

ಕೋರ್ ಬ್ಯಾಂಕಿಂಗ್ ಸಿಸ್ಟಮ್ ಅಡಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಈಗಾಗಲೇ ಆರ್ಟಿಜಿಎಸ್, ನೆಟ್​, ಮೊಬೈಲ್ ಬ್ಯಾಂಕಿಂಗ್ ವ್ಯಾನ್, ಎಟಿಎಂ, ಕಿಸಾನ್ ರುಪೆ ಡೆಬಿಟ್ ಕಾರ್ಡ್​, ಎಸ್ಎಂಎಸ್ ಸೇರಿ ವಿವಿಧ ಸೌಲಭ್ಯ ಒಳಗೊಂಡಿದೆ ಎಂದು ತಿಳಿಸಿದರು.

ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇರಿ ಅತ್ಯಾಧುನಿಕ ಸೌಲಭ್ಯಗಳ ಕುರಿತು ಬೆಂಗಳೂರಿನ ಜೇನಿತ್ ಸ್ಟಾ್ವೇರ್ ಪ್ರೈವೇಟ್ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕ ನಂದಕುಮಾರ ಮಾಹಿತಿ ನೀಡಿದರು.

ಬ್ಯಾಂಕ್ ನಿರ್ದೇಶಕರಾದ ರಾಚಪ್ಪ ಪಾಟೀಲ್, ಬಸವರಾಜ ಹೆಬ್ಬಾಳೆ, ವಿಜಯಕುಮಾರ ಪಾಟೀಲ್ ಗಾದಗಿ, ಸಂಗಮೇಶ ಪಾಟೀಲ್, ಪರಮೇಶ್ವರ ಮಗಟೆ, ಬಸವರಾಜ ಗೋಣೆ, ಹಣಮಂತರಾವ ಪಾಟೀಲ್, ಶಿವಬಸಪ್ಪ ತಗಾರೆ, ಬೆಂಗಳೂರಿನ ಅಲಾಕ್ರೇಟಿ ನೆಟ್ವರ್ಟ್​ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ ಸಂದೀಪ, ನಬಾರ್ಡ್​ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಾಮರಾವ, ಬ್ಯಾಂಕ್ ಸಿಇಒ ಮಲ್ಲಿಕಾರ್ಜುನ ಮಹಾಜನ್, ಜಿಎಂ ವಿಠ್ಠಲರಡ್ಡಿ ಯಡಮಲ್ಲೆ, ಡಿಜಿಎಂಗಳಾದ ಪಂಢರಿರಡ್ಡಿ, ಅನೀಲ ಪಾಟೀಲ್, ಸದಾಶಿವ ಪಾಟೀಲ್, ಬಸವರಾಜ ಕಲ್ಯಾಣ, ದೀನದಯಾಳ್ ಮನ್ನಳ್ಳಿ, ರಾಜಶೇಖರಯ್ಯ, ಪ್ರಮುಖರಾದ ಶಾಂತಕುಮಾರ ಮುದಾಳೆ, ನಂದಕುಮಾರ ಜೋಶಿ, ಮಾಧವರಾವ ಪಾಟೀಲ್ ಇತರರಿದ್ದರು.

ಜಿಎಂ ಚನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು. ಶ್ರೀಧರ ಕುಲಕರ್ಣಿ ನಿರೂಪಣೆ ಮಾಡಿದರು. ಜಿಲ್ಲೆಯ ಆಯ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ, ಏಜೆಂಟರಿಗೆ ಪಿಗ್ಮಿ ಸಂಗ್ರಹ ಯಂತ್ರ ಹಾಗೂ ಸಹಾಯಕ ಅಭಿವೃದ್ಧಿ ಅಧಿಕಾರಿಗಳಿಗೆ ಮೊಬೈಲ್ ವಿತರಿಸಲಾಯಿತು.

ಎಸ್ಎಚ್​ಜಿಗೆ 1000 ಕೋಟಿ ರೂ. ಸಾಲ ಗುರಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ವಸಹಾಯ ಗುಂಪು (ಎಸ್ಎಚ್​ಜಿ)ಗಳಿಗೆ 1000 ಕೋಟಿ ರೂ. ಸಾಲ ಒದಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದರು. 2021-22ರಲ್ಲಿ ಸ್ವಸಹಾಯ ಗುಂಪುಗಳಿಗೆ 500 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿತ್ತು. ಆದರೆ 507 ಕೋಟಿ ರೂ. ಸಾಲ ವಿತರಿಸಲಾಗಿದೆ. ಎಸ್ಎಚ್ಜಿಗೆ ಇಷ್ಟೊಂದು ದೊಡ್ಡ ಮೊತ್ತದ ಸಾಲ ವಿತರಿಸಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆ ನಮ್ಮ ಬ್ಯಾಂಕ್​ನದ್ದಾಗಿದೆ ಎಂದರು. ಸ್ವಸಹಾಯ ಗುಂಪುಗಳ ಮೂಲಕ ಜಿಲ್ಲೆಯಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತಗೊಳಿಸಿದ ಶ್ರೇಯ ಬ್ಯಾಂಕ್​ಗೆ ಸಲ್ಲುತ್ತದೆ. ಪ್ರಧಾನಮಂತ್ರಿ ಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಯೋಜನೆಯಡಿ 2016ರಿಂದ ಈವರೆಗೆ ಜಿಲ್ಲೆ ರೈತರಿಗೆ 419 ಕೋಟಿ ರೂ. ಪರಿಹಾರ ದೊರಕಿದೆ. ಬ್ಯಾಂಕ್ ಪಿಕೆಪಿಎಸ್ಗಳ ಮೂಲಕ ರೈತರ ಮನೆ ಬಾಗಿಲಿಗೆ ರಸಗೊಬ್ಬರ ಪೂರೈಸಿ ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net