ರಾಷ್ಟ್ರೀಯ ಸಂಪತ್ತಿನ ರಕ್ಷಣೆ ಎಲ್ಲರ ಹೊಣೆ

11KWR1A
Published on

ವಿಜಯವಾಣಿ ಸುದ್ದಿಜಾಲ ಕಾರವಾರ

ಮುಂದಿನ ಪೀಳಿಗೆಗೆ ನೈಸರ್ಗಿಕ ಸಂಪತ್ತು ಉಳಿಯಬೇಕು ಎಂದರೆ ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಹೇಳಿದರು.

ಡಿಎಫ್​ಒ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಸಂಪತ್ತನ್ನು ನಮ್ಮ ಮನೆಯ ಸ್ವತ್ತನಂತೆ ಕಾಳಜಿ ಮಾಡಬೇಕು. ಅವುಗಳನ್ನು ರಕ್ಷಿಸುವ ಜವಾಬ್ದಾರಿ ಎಲ್ಲರದ್ದೂ ಆಗಿದೆ ಎಂದರು. ಸರ್ಕಾರಿ ನೌಕರರು ಕರ್ತವ್ಯವನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಪ್ರಾಮಾಣಿಕವಾಗಿ ಮಾಡಿದರೆ, ದೇವರು ಅದರ ಫಲ ಕೊಡುತ್ತಾನೆ. ಹುತಾತ್ಮ ಅರಣ್ಯಾಧಿಕಾರಿಗಳ ತ್ಯಾಗವನ್ನು ನೆನೆದರೆ ಈಗಿರುವ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸ್ಪೂರ್ತಿ ಬರುತ್ತದೆ ಎಂದರು. ಡಿಎಫ್​ಒ ಡಾ.ಪ್ರಶಾಂತ ಕೆ.ಸಿ. ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಮಾಜಿಕ ಅರಣ್ಯ ವಿಭಾಗದ ಡಿಎಫ್​ಒ ಮಂಜುನಾಥ ನಾವಿ, ಎಸಿಎಫ್​ಗಳಾದ ಜಯೇಶ, ಅಣ್ಣೆಗೌಡ, ಡಿಎಫ್​ಒ ಕಚೇರಿ ಅಧೀಕ್ಷಕ ವಿ.ಆರ್.ಗಾಂವಕರ್ ವೇದಿಕೆಯಲ್ಲಿದ್ದರು. ಹುತಾತ್ಮರ ಸ್ಮರಣಾರ್ಥ ಮೂರು ಬಾರಿ ಗುಂಡು ಸಿಡಿಸಿ, ಮೌನಾಚರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net