

ಚಿತ್ರದುರ್ಗ: ಮಹಾರಾಷ್ಟ್ರದ ತಾಲಗಾರ್‌ನಲ್ಲಿ ಡಿ. 3ರಿಂದ 9ರವರೆಗೂ ನಡೆಯಲಿರುವ ರಾಷ್ಟ್ರಮಟ್ಟದ ಹಗ್ಗ-ಜಗ್ಗಾಟ (ಟಗ್ ಆಫ್ ವಾರ್) ಸ್ಪರ್ಧೆಗೆ ಚಿತ್ರದುರ್ಗದ ಶ್ರೀಹರಿ ಎಜುಕೇಶನಲ್ ಟ್ರಸ್ಟ್‌ನ ಚೈತನ್ಯ ಪಿಯು ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡ ಆಯ್ಕೆಯಾಗಿದೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಅಧ್ಯಕ್ಷ ಎಸ್.ಎಂ.ಮಂಜುನಾಥ್, ಕಾರ್ಯದರ್ಶಿ ಎಸ್.ಎಂ.ಮಧು, ನಿರ್ದೇಶಕಿ ರಕ್ಷಾ ಮಧು, ಪ್ರಾಚಾರ್ಯ ಪೂರ್ಣ ಬೋಧಾಚಾರ್ಯ, ಉಪ ಪ್ರಾಚಾರ್ಯ ಅಜೇಯ್, ದೈಹಿಕ ಶಿಕ್ಷಕ ಈರಣ್ಣ, ತರಬೇತುದಾರ ಚೆನ್ನಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.