

ಚಿತ್ರದುರ್ಗ: ಬೆಂಗಳೂರಿನ ಉರ್ದು ಮತ್ತು ಇತರೆ ಭಾಷಾ ಅಲ್ಪಸಂಖ್ಯಾತರ ನಿರ್ದೇಶನಾಲಯ,ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲ ಯದ ಆಶ್ರಯದಲ್ಲಿ ನಗರದ ಡಯಟ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಿರಿಧಾನ್ಯಗಳು-ಅದ್ಭುತ ಆಹಾರ/ರೂಢಿಗತ ಪಥ್ಯಾಹಾರ ವಿಷಯದ ಕುರಿತ ರಾಜ್ಯಮಟ್ಟದ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ,ಶಿವಮೊಗ್ಗ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆ 10ನೇ ತರಗತಿ ವಿದ್ಯಾರ್ಥಿ ಗೋವರ್ಧ ನ್‌ಗೌಡ ಪ್ರಥಮ ಸ್ಥಾನ ಪಡೆದು,ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಅಕ್ಟೋಬರ್12ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟ ದ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾನೆ.
ವಿದ್ಯಾರ್ಥಿಗೆ ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪ್ರಶಸ್ತಿಪತ್ರ ವಿತರಿಸಿದರು. ಜಿಲ್ಲಾನೋಡಲ್ ಅಧಿಕಾರಿ ಬಿ.ಎಸ್.ನಿತ್ಯಾನಂದ ಉ ಪನ್ಯಾಸಕರಾದ ಆರ್.ನಾಗರಾಜು,ಎಸ್.ಬಸವರಾಜು,ಶಿಕ್ಷಣ ಅಧಿಕಾರಿ ಪ್ರಶಾಂತ್‌ಕುಮಾರ್‌ಬಿಸ್ವಾಲ್,ತೀರ್ಪುಗಾರರಾದ ಪುಟ್ಟರಂಗಪ್ಪ,ನಾ ಗೇಂದ್ರಚೌಧರಿ,ಮೂರ್ತಾಚಾರ್,ಹಾಲೇಶಿ ಇದ್ದರು.