ರಾಷ್ಟ್ರಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆ

HUN-OCT-28-1(SHASTRI SCHOOL PROGRAMME)
Published on

ಹುಣಸೂರು: ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾಗುವ ಮೂಲಕ ಸಾಧನೆಗೈದಿದ್ದಾರೆ. ಮಂಗಳೂರಿನ ತಲಪಾಡಿಯ ಶಾರದ ವಿದ್ಯಾನಿಕೇತನದಲ್ಲಿ ಇತ್ತೀಚೆಗೆ ಆಯೋಜನೆಗೊಂಡಿದ್ದ ಪ್ರಾಂತೀಯ ಮಟ್ಟದ ಗಣಿತ ಮತ್ತು ವಿಜ್ಞಾನ ಮೇಳದ ಕಿಶೋರವರ್ಗ ವಿಭಾಗದಲ್ಲಿ ವಿದ್ಯಾರ್ಥಿನಿ ಶ್ರೀಶಕ್ತಿ ವಿಜ್ಞಾನ ಪತ್ರವಚನದಲ್ಲಿ ಮತ್ತು ತರುಣ ವರ್ಗದಲ್ಲಿ ಕೆ.ಪಿ.ಶ್ರೇಯಾ ತ್ರಿಕೋನಮಿತಿ ಆಧಾರಿತ ಪ್ರತಿರೂಪ ವಿಷಯದಲ್ಲಿ, ಸಮ್ಮಿತಾಶರ್ಮ ವಿದ್ಯುತ್ಕಾಂತೀಯ ಪ್ರೇರಣೆ, ರಸಪ್ರಶ್ನೆ ವಿಭಾಗದಲ್ಲಿ ಭರತ್, ಯಶಸ್, ಲಕ್ಷ್ಮೀಶ ಪ್ರಥಮ ಸ್ಥಾನದೊಂದಿಗೆ ಕ್ಷೇತ್ರಮಟ್ಟಕ್ಕೆ ಆಯ್ಕೆಯಾದರು.

ನಂತರ ಶಾರದಾ ವಿದ್ಯಾನಿಕೇತನದಲ್ಲೇ ಆಯೋಜನೆಗೊಂಡಿದ್ದ ಕ್ಷೇತ್ರಮಟ್ಟದ ಸ್ಪರ್ಧೆಯಲ್ಲೂ ವಿದ್ಯಾರ್ಥಿಗಳು ಸಾಧನೆಗೈದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ವಿಜ್ಞಾನಮೇಳವು ನ.12ರಿಂದ 16ರವರೆಗೆ ಜೈಪುರದಲ್ಲಿ ಮತ್ತು ನ.19ರಿಂದ 21ರವರೆಗೆ ಒರಿಸ್ಸಾದಲ್ಲಿ ಆಯೋಜನೆಗೊಂಡಿರುವ ಗಣಿತಮೇಳದಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಸಂಸ್ಥೆ ಕಾರ್ಯದರ್ಶಿ ರಾಧಾಕೃಷ್ಣ ಮತ್ತು ಆಡಳಿತ ಮಂಡಳಿ ಅಭಿನಂದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net