

ಚಿತ್ರದುರ್ಗ: ರಾಜ್ಯಮಟ್ಟದ ಕ್ರೀಡಾಕೂಟದ 400 ಮೀ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಚಿತ್ರದುರ್ಗದ ವಿದ್ಯಾ ವಿಕಾಸ ವಿದ್ಯಾಸಂಸ್ಥೆಯ 10 ನೇ ತರಗತಿ ವಿದ್ಯಾರ್ಥಿ ನೌಮನ್ ಅಹಮ್ಮದ್ ಷರೀಫ್‌ನನ್ನು ಆತನ ಪಾಲಕರಾದ ಜಮೀಲ್ ಅಹಮ್ಮದ್ ಷರೀಫ್-ಫೌಜಿಯಾ ಬಾನು ಅವರೊಂದಿಗೆ ಈಚೆಗೆ ಸನ್ಮಾನಿಸಲಾಯಿತು. ಸಂಸ್ಥೆ ಕಾರ‌್ಯದರ್ಶಿ ಬಿ.ವಿಜಯ್‌ಕುಮಾರ್, ವ್ಯವಸ್ಥಾಪಕ ನಿರ್ದೇಶಕರಾದ ಪೃಥ್ವೀಶ, ಪಿ.ಸಿ.ಸುನಿತಾ, ಮುಖ್ಯಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ, ಪ್ರಾಚಾರ‌್ಯ ಪಿ.ಬಸವರಾಜಯ್ಯ, ಉಪ ಪ್ರಾಚಾರ‌್ಯ ಬಿ.ಅವಿನಾಶ್ ಇದ್ದರು.