ರಾಷ್ಟ್ರಪರ ಚಿಂತನೆ ಮೈಗೂಡಿಸಿಕೊಳ್ಳಿ

abvp
Published on

ಬೀದರ್: ಯುವಶಕ್ತಿ ರಾಷ್ಟ್ರದ ದೊಡ್ಡ ಸಂಪತ್ತಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಮಯ ಪರಿಪಾಲನೆ ಮತ್ತು ಸೋಮಾರಿತನ ಬಿಟ್ಟು ಗುರುವಿನ ಮಾರ್ಗದರ್ಶನದೊಂದಿಗೆ ನಿರ್ದಿಷ್ಟ ಗುರಿ ತಲುಪಬೇಕು ಎಂದು ಗುಲ್ಬರ್ಗ ವಿವಿ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೀದರ್ ಶಾಖೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರ ಕಾರ್ಯಕ್ಷಮತೆ ಹೆಚ್ಚಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳು ರಾಷ್ಟ್ರೀಯತೆ ಮೈಗೂಡಿಸಿಕೊಳ್ಳುವ ಅಗತ್ಯವಿದೆ. ರಾಷ್ಟ್ರಪರ ಚಿಂತನೆ ಹೊಂದಿದವರು ಸಮಾಜಮುಖಿ ಜೀವನ ಸಾಗಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.

ಎಬಿವಿಪಿ ಜಿಲ್ಲಾ ಪ್ರಮುಖ ಯೋಗೇಶ್ ಮಾತನಾಡಿ, ಕಾಲೇಜು ಕ್ಯಾಂಪಸ್ಗಳನ್ನು ಕೇಂದ್ರವಾಗಿ ಇಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ರಾಷ್ಟ್ರಭಕ್ತಿ ತುಂಬುವ ಹಾಗೂ ಸಮಾಜಕ್ಕೆ ಉತ್ತಮ ನಾಯಕರನ್ನು ಕೊಡುವ ಕೆಲಸ ಪರಿಷತ್ ಮಾಡುತ್ತಿದೆ. ರಾಷ್ಟ್ರಭಕ್ತರ ನಿರ್ಮಾಣದೊಂದಿಗೆ ದೇಶದಲ್ಲಿ ಸೈನ್ಯದಂತೆ ಪರಿಷತ್ ಕಾರ್ಯಕರ್ತರು ಕಾರ್ಯೋನ್ಮುಖರಾಗಿದ್ದಾರೆ ಎಂದರು.

ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ಮಾತನಾಡಿದರು. ವಿಭಾಗ ಸಂಘಟನಾ ಕಾರ್ಯದರ್ಶಿ ಧನಂಜಯ, ಪ್ರಿಯಾಂಕ ಕುಲಕರ್ಣಿ, ಸ್ವರೂಪರಾಣಿ ನಾಗೂರೆ, ವೀರೇಂದ್ರ ಜಿಂದೆ ಇದ್ದರು. ಶಿವಲೀಲಾಬಾಯಿ ನಿರೂಪಣೆ ಮಾಡಿದರು. ವಿಕಾಸ ಚೋರಮಲ್ಲೆ ವಂದಿಸಿದರು.

ಪರಿಷತ್ ಗೆ ಪದಾಧಿಕಾರಿಗಳ ನೇಮಕ
ಕಾರ್ಯಕ್ರಮದಲ್ಲಿ ಎಬಿವಿಪಿ 2021ನೇ ಸಾಲಿಗೆ ಬೀದರ್ ನಗರ ಹಾಗೂ ತಾಲೂಕು ಶಾಖೆ ಪದಾಧಿಕಾರಿಗಳ ನೇಮಕ ನಡೆಯಿತು. ಬೀದರ್ ನಗರ: ಅನೀಲ ಚೌಧರಿ (ಅಧ್ಯಕ್ಷ), ನಾಗೇಶ ಬಿರಾದಾರ (ಉಪಾಧ್ಯಕ್ಷ), ಪ್ರದೀಪರೆಡ್ಡಿ (ಕಾರ್ಯದರ್ಶಿ), ಲಿಂಗರಾಜ ಬಿರಾದಾರ, ಜ್ಯೋತಿ, ಪಂಚಶೀಲಾ (ಸಹ ಕಾರ್ಯದರ್ಶಿಗಳು), ಉಜ್ವಲಾ (ವಿದ್ಯಾರ್ಥಿನಿ ಪ್ರಮುಖ), ಪ್ರಿಯಾಂಕ, ಸಂಧ್ಯಾರಾಣಿ, ಕನಕಶ್ರೀ (ಸಹ ವಿದ್ಯಾರ್ಥಿನಿ ಪ್ರಮುಖ). ಬೀದರ್ ತಾಲೂಕು: ಸಾಯಿ ಮೂಲಗೆ (ಸಂಚಾಲಕ), ಅರವಿಂದ ಸುಂದಳಕರ್ (ಎಸ್ಎಫ್ಡಿ ಪ್ರಮುಖ), ದತ್ತಾತ್ರೇಯ (ಅಧ್ಯಯನ ಸಂಪರ್ಕ ಪ್ರಮುಖ), ಶಿವು ಶೀಲವಂತ (ಹೋರಾಟ ಪ್ರಮುಖ), ಕಿರಣಕುಮಾರ (ಹಾಸ್ಟೆಲ್ ಪ್ರಮುಖ), ಶಿವಾನಂದ ಚಿಮಕೋಡೆ, ಪರಮೇಶ್ವರ, ನಟರಾಜ, ಆನಂದ, ನಾಗನಾಥ, ಶಿವಾಕಾಂತ ಪಾಟೀಲ್, ಆದಿ ಶೀಲವಂತ, ಸಂಜುಕುಮಾರ, ವೀರೇಶ ರೇಕುಳಗಿ, ಪ್ರವೀಣ ರೇಕುಳಗಿ (ಕಾರ್ಯಕಾರಿಣಿ ಸದ್ಯಸರು).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net