ರಾಷ್ಟ್ರಪತಿಗೆ ಕೌದಿ, ಸೀರೆ ಉಡುಗೊರೆ

2222222
Published on

ಧಾರವಾಡ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಐಐಐಟಿ ಕಾರ್ಯಾಧ್ಯಕ್ಷೆ ಸುಧಾ ಮೂರ್ತಿ ಅವರು 2 ಕೌದಿ, ಇಳಕಲ್ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡಿದರು. ದೇವದಾಸಿ ಪದ್ಧತಿ ಬಿಟ್ಟು ಮುಖ್ಯವಾಹಿನಿಗೆ ಬಂದ ರಾಯಚೂರಿನ ವಿಮೋಚನಾ ಸಂಸ್ಥೆಯ ಮಹಿಳೆಯರು ತಯಾರಿಸಿದ್ದ ಕೌದಿಗಳನ್ನು ವೇದಿಕೆಯಲ್ಲಿ ಉಡುಗೊರೆ ನೀಡಿದರು. ಕೌದಿ ತಯಾರಿಸುವ ಬಗೆ, ಅದರ ಪ್ರಯೋಜನಗಳ ಕುರಿತು ತಾವೇ ಬರೆದ ‘ಥ್ರೀ ಥೌಜಂಡ್ ಸ್ಟಿಚ್ಸ್’ ಕೃತಿಯನ್ನು ನೀಡಿದರು.
ಇದೇವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರಚಂದ ಗೆಹ್ಲೋತ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ತಲಾ 2 ಕೌದಿಗಳನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net