ರಾಷ್ಟ್ರದ ಏಳಿಗೆಯಲ್ಲಿ ಮಹಿಳೆಯರ ಪಾತ್ರ ಅಮೂಲ್ಯ

2
Published on

ಸವದತ್ತಿ: ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಮೂಲ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಸುನೀತಾ ಪಾಟೀಲ ಹೇಳಿದರು.
ಇಲ್ಲಿನ ಕೆ.ಎಂ. ಮಾಮನಿ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಟಕ, ಲೆಂಗಿಕ ಕಿರುಕುಳ ನಿವಾರಣಾ ಟಕ ಹಾಗೂ ಆಂತರಿಕ ದೂರು ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾಥಿನಿಯರು ಓದಿ ಸುಭದ್ರ ಜೀವನ ಕಟ್ಟಿಕೊಳ್ಳಬೇಕು. ಎಲ್ಲೆಡೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಎಚ್ಚರಿಕೆಯಿಂದ ಇರಬೇಕು. ಬಾಲ್ಯವಿವಾಹದಂತಹ ಕಾನೂನುಬಾಹಿರ ಕೃತ್ಯ ತಡಗಟ್ಟಲು ಸಹಕರಿಸಬೇಕು ಎಂದರು.

ಧಾರವಾಡ ಉಚ್ಚ ನ್ಯಾಯಾಲಯದ ವಕೀಲೆ ಸ್ನೇಹಾ ಕಟ್ಟಿ ಮಾತನಾಡಿ, ಕಾನೂನು ಮಹಿಳೆಯರ ಪರವಾಗಿದ್ದು, ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳಬಾರದು. ಪ್ರತಿಯೊಬ್ಬರೂ ಸರಿಯಾಗಿ ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕು ಎಂದರು.
ದೌರ್ಜನ್ಯ ನಿಯಂತ್ರಣ, ಜಾಗತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ಬಸವರಾಜ ಆಯಟ್ಟಿ ಉದ್ಘಾಟಿಸಿ ಮಾತನಾಡಿ, ಸ್ವಾವಲಂಬಿ ಜೀವನ ನಡೆಸಲು ಸರ್ಕಾರದ ಯೋಜನೆಗಳಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ.ಮಾರುತಿ ಎಂ. ಅಧ್ಯತೆ ವಹಿಸಿದ್ದರು. ಶಕುಂತಲಾ ಅಜ್ಜನ್ನವರ ಪ್ರಾಸ್ತಾವಿಕ ಮಾತನಾಡಿದರು. ಡಾ.ಎಂ.ವಿ.ಚಲವಾದಿ, ಪ್ರೊ.ಬಿ.ಸಿ. ನಿಡಗುಂದಿ, ವಿದ್ಯಾರ್ಥಿ ಪ್ರತಿನಿ-ಧಿ ಸವಿತಾ ಜಾಲಿಕಟ್ಟಿ, ಸುಮಾ ಜಾವೂರ, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ರೋಹಿಣಿ ಚುಂಚನೂರ, ರೋಹಿಣಿ ಬನಹಟ್ಟಿ ಸ್ವಾಗತಿಸಿದರು. ಮಧುಮತಿ ಗುರ್ಲಹೊಸುರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net