ರಾಷ್ಟ್ರಗೀತೆಗಳಿಂದ ದೇಶಭಕ್ತಿ ಇಮ್ಮಡಿ

14..1
ಅಥಣಿ ರೋಟರಿ ಕ್ಲಬ್ ವತಿಯಿಂದ ದೇಶಭಕ್ತಿ ಗೀತೆಗಳ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಜಾನನ ಮಂಗಸೂಳಿ, ಯಲಗೂರ ಗುಂಡಾ, ಡಾ.ವರ್ಷಾ ಮೇತ್ರಿ, ಅನಿಲ ದೇಶಪಾಂಡೆ, ಸುಜಾತಾ ಜಗದಾಳಮಠ, ವೈಶಾಲಿ ಮಠಪತಿ, ಪ್ರಭಾವತಿ ಬಳೊಳ್ಳಿ, ಸುರೇಖಾ ಪಾಟೀಲ ಇತರರಿದ್ದರು.
Published on

ಅಥಣಿ: ಸ್ವಾತಂತ್ರ್ಯೋತ್ಸವ ಮತ್ತು ಇಲ್ಲಿನ ಇತಿಹಾಸ ಪುರುಷರ ಕುರಿತಾದ ಗೀತೆಗಳಿಂದ ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಾಗುತ್ತದೆ ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.

ಪಟ್ಟಣದ ಗುಜರಾತಿ ಭವನದಲ್ಲಿ ರೋಟರಿ ಕ್ಲಬ್ ವತಿಯಿಂದ 76ನೇ ಸ್ವಾತಂತ್ರ್ಯೋತ್ಸವ ಮತ್ತು ರೋಟರಿ ಕ್ಲಬ್‌ನ ರಜತ ಮಹೋತ್ಸವ ಅಂಗವಾಗಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಆ.15 ಮತ್ತು ಜನವರಿ 26ಕ್ಕೆ ಮಾತ್ರ ದೇಶಭಕ್ತಿ ಸೀಮಿತವಾಗಬಾರದು. ಸ್ವಾತಂತ್ರ್ಯ ಚಳವಳಿಯತ್ತ ಸೆಳೆಯಲು ದೇಶಭಕ್ತಿ ಗೀತೆಗಳು ಪೂರಕವಾಗಿ ಕೆಲಸ ಮಾಡಿವೆ ಎಂದರು.

ಅಧ್ಯಕ್ಷ ಅನಿಲ ದೇಶಪಾಂಡೆ ಮಾತನಾಡಿ, ರೋಟರಿ ಕ್ಲಬ್ 25ನೇ ವರ್ಷಾಚರಣೆಯಲ್ಲಿ ದೇಶಭಕ್ತಿ ಗೀತೆಗಳ ಸ್ಪರ್ಧೆ ಆಯೋಜನೆಯಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ದೇಶಭಕ್ತಿ ಪ್ರಜ್ಞೆ ಜಾಗೃತಗೊಳ್ಳುತ್ತದೆ ಎಂದರು.
ಸ್ಪ

ರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ಅರುಣ ಸೌದಾಗರ, ಡಾ.ಪಿ.ಪಿ.ಮಿರಜ, ಅರುಣ ಯಲಗುದ್ರಿ, ಪ್ರವೀಣ ಭಾಟೆ, ಯಲಗೂರ ಗುಂಡಾ, ಸಂತೋಷ ಬೊಮ್ಮಣವರ, ಮೇಘರಾಜ ಪರಮಾರ, ಶ್ರೀಕಾಂತ ಅಥಣಿ, ಮೋಹನ ಕಾಂಬಳೆ, ಪ್ರಫುಲ ಪಡನಾಡ, ಸುರೇಶ ಪಾಟೀಲ, ಡಾ.ವರ್ಷಾ ಮೇತ್ರಿ, ಪದ್ಮಾ ಅಥಣಿ, ಸುಜಾತಾ ಜಗದಾಳಮಠ, ವೈಶಾಲಿ ಮಠಪತಿ, ಪ್ರಭಾವತಿ ಬಳೊಳ್ಳಿ, ಸುರೇಖಾ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net