ರಾಷ್ಟ್ರ ರಕ್ಷಣೆಗೆ ಸದಾ ಸಿದ್ಧರಾಗಿರಿ

26 vikram 5
Published on

ಧಾರವಾಡ: ರಾಷ್ಟ್ರ ರಕ್ಷಣೆಗಾಗಿ ಗಡಿಗಳಲ್ಲಿ ನಿಂತು ಸದಾಕಾಲ ದೇಶ ರಕ್ಷಣೆ ಮಾಡುತ್ತಿರುವ ಸೈನಿಕರ ಮನೋಬಲ ಹೆಚ್ಚಿಸುವ ಕಾರ್ಯವನ್ನು ನಾವೆಲ್ಲ ಮಾಡಬೇಕು ಎಂದು ಧಾರವಾಡ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
ಕಾರ್ಗಿಲ್ ವಿಜಯೋತ್ಸವ ನಿಮಿತ್ತ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಕಾರ್ಗಿಲ್ ಸ್ತೂಪ ಬಳಿ ಕರ್ನಾಟಕ ಸೈನಿಕ ಸೇವಾ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಸೈನಿಕರ ಜತೆಗೆ ನಾವು ಹೋಗಲು ಆಗುವುದಿಲ್ಲ. ಹೀಗಾಗಿ ನಾವು ಇದ್ದ ಸ್ಥಳದಿಂದಲೇ ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕು. ಸೈನಿಕರ ಟೀಕೆ ಮಾಡುವವರ ವಿರುದ್ಧ ಸಜ್ಜನರೆಲ್ಲ ಮೌನವಾಗಿರದೆ ಧ್ವನಿ ಎತ್ತಿ ಸೈನಿಕರಲ್ಲಿ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ಮೇಜರ ಸಿದ್ಧಲಿಂಗಯ್ಯ ಹಿರೇಮಠ, ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮಿನಗಡ, ರಮೇಶ ನಾಡಿಗೇರ, ಚಂದ್ರು ಮುತ್ತಗಿ, ರವೀಂದ್ರ ಆಕಳವಾಡಿ, ವೀರೇಶ ಕೆಲಗೇರಿ, ಪದಾಧಿಕಾರಿಗಳು, ಸೈನಿಕರು, ಮಾಜಿ ಸೈನಿಕರು, ಇತರರು ಇದ್ದರು.
ಮಾಯಾರಾಮನ್ ಚಿಕ್ಕೆರೂರ ದೇಶಭಕ್ತಿ ಗೀತೆ ಪ್ರಸ್ತುತ ಪಡಿಸಿದರು. ಉದಯ ಯಂಡಿಗೇರಿ ಸ್ವಾಗತಿಸಿದರು. ಆನಂದ ಕುಲಕರ್ಣಿ ನಿರೂಪಿಸಿದರು. ಶಿವು ಅಮಿನಗಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net