ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದು ಗಮನ ಸೆಳೆದ ಅಂಗವಿಕಲರು

13M.D.R.1
ಮದ್ದೂರು ಪಟ್ಟಣದ ಸರ್ಕಾರಿ ಬಾಲಕರ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಚೇತನರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿ ಹನುಮಶೆಟ್ಟಿ ಉದ್ಘಾಟಿಸಿದರು. ಸಿ.ಶ್ರೀಧರ್, ಮಹಾಂತೇಶ್, ಪುಟ್ಟಸ್ವಾಮಿ, ಭೈರೇಗೌಡ, ಶಿವಲಿಂಗಯ್ಯ ಇದ್ದರು.
Published on

ಮದ್ದೂರು: ಅಂಗವಿಕಲತೆ ಶಾಪವಲ್ಲ ಅದನ್ನು ಮೆಟ್ಟಿ ನಿಂತು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಮಂದಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆಂದು ಕ್ಷೇತ್ರ ಸಮನ್ವಯಾಧಿಕಾರಿ ಹನುಮಾಶೆಟ್ಟಿ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕರ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಗವಿಕಲರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಗವಿಕಲರಿಗೆ ಸರ್ಕಾರ ಹಲವು ರೀತಿಯ ಸವಲತ್ತುಗಳನ್ನು ನೀಡುತ್ತಿದ್ದು ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಡಿಡಿಪಿಐ ಕಚೇರಿಯ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಸಿ.ಶ್ರೀಧರ ಮಾತನಾಡಿ, ಸರ್ಕಾರ ಮತ್ತು ಇಲಾಖೆಯಿಂದ ಸಿಗುವಂತಹ ಸವಲತ್ತುಗಳನ್ನು ತಿಳಿಸುವುದರ ಮೂಲಕ ಪ್ರತಿ ವರ್ಷ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲಾಖೆಯಿಂದ ಏರ್ಪಡಿಸುತ್ತೇವೆ. ಅಂಗವಿಕಲರು ಮತ್ತು ಪಾಲಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಬಿಇಒ ಸಿ.ಎಚ್.ಕಾಳಿರಯ್ಯ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. 40 ರಿಂದ 50 ವಿಶೇಷ ಅಗತ್ಯತೆಯುಳ್ಳ ಮಕ್ಕಳು ಮತ್ತು ಪಾಲಕರು ಕ್ರೀಡಾಕೂಟದಲ್ಲಿ ಭಾಗವಹಿಸಿ ಗಮನ ಸೆಳೆದರು.

ವಿಶೇಷ ಸಂಪನ್ಮೂಲ ಶಿಕ್ಷಕರಾದ ಅಂದಾನಪ್ಪ, ಸುರೇಶ್, ಎ.ಜೆ.ಅಂಕಣ್ಣ, ಸಿದ್ದೇಗೌಡ, ತಾಲೂಕು ರಮಣ ಮಹರ್ಷಿ ಮುಖ್ಯಸ್ಥರಾದ ಮಹಾಂತೇಶ್, ಎಂ.ಆರ್.ಡಬ್ಲ್ಯು ಪುಟ್ಟಸ್ವಾಮಿ, ದೈಹಿಕ ಶಿಕ್ಷಕರಾದ ಭೈರೇಗೌಡ, ಶಿವಲಿಂಗಯ್ಯ, ನಾಗರತ್ನ, ಪ್ರಶೀಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net