

ಹೊಳೆನರಸೀಪುರ : ರಾಜ್ಯಮಟ್ಟದ ಅಂಡರ್ 17 ಕ್ರಿಕೆಟ್ ಪಂದ್ಯಾವಳಿ ಜಿಲ್ಲೆಯ ಬಿ.ಪಿ. ಚಿರು ಕೃಷ್ಣ , ಆರ್.ನಿಶ್ಚಯ್ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಅವರು ಕರ್ನಾಟಕ ತಂಡದಲ್ಲಿ ಆಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಅಂಡರ್ 17 ಕ್ರಿಕೆಟ್ ಪಂದ್ಯಾ ವಳಿಯಲ್ಲಿ ಮೈಸೂರು ತಂಡ ಚಾಂಪಿಯನ್ ಆಗಿದ್ದು, ಟೀಂನಲ್ಲಿ ಬಾನುಗೊಂದಿ ಗ್ರಾಮದ ಬಿ.ಪಿ ಚಿರು ಕೃಷ್ಣ ಮತ್ತು ಆರ್.ನಿಶ್ಚಯ್ ಇರುವುದು ವಿಶೇಷ.