

ಮೈಸೂರು: ರಾಜ್ಯ ಮಟ್ಟದ ಇನೋವೇಶನ್ ಸ್ಪರ್ಧೆಯಲ್ಲಿ ನಗರದ ಜಲಪುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಮತ್ತು ಮೈಸೂರು ತಾಲೂಕಿನ ಹಿಟ್ಟುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ.
ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಆಡೋಬಿ, ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದೊಂದಿಗೆ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ ರಾಜ್ಯ ಮಟ್ಟದ 3 ದಿನಗಳ ಇನೋವೇಶನ್ ಎಕ್ಸ್‌ಪ್ರೆಸ್ ಸ್ಪರ್ಧೆ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಸಾಮಾಜಿಕ ಕಳಕಳಿಯ ದೃಷ್ಟಿಕೋನದಿಂದ ಮಾಡಲಾದ ರಸ್ತೆಬದಿಯ ಸಸ್ಯಗಳಿಗೆ ಹನಿ ನೀರಾವರಿ ವ್ಯವಸ್ಥೆ, ಕಾಡ್ಗಿಚ್ಚಿನಿಂದ ಅರಣ್ಯ ಸಂರಕ್ಷಣೆ ಕುರಿತಾದ ಮೂಲ ಮಾದರಿಗಳು ಬಹುಮಾನವನ್ನು ಪಡೆದು ಪ್ರಶಂಸೆಗೆ ಕಾರಣವಾಗಿವೆ.
ಜೋಶ್ವ, ಶ್ರೇಯಸ್ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು. ಮೆಂಟರ್ಸ್ ಶಿಕ್ಷಕರಾಗಿ ಮುತ್ತಣ್ಣ ಬಿಡನಾಳ ನಿಂಗಪ್ಪ , ಸಾನಿಕಾ ಮತ್ತು ಶಿವಕುಮಾರ್ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಮೆಂಟರ್ ಶಿಕ್ಷಕಿಯಾಗಿ ಟಿ.ಎಸ್.ಪವಿತ್ರಾ ಕಾರ್ಯನಿರ್ವಹಿಸಿದರು. ಸಮಗ್ರ ಶಿಕ್ಷಣ ಕರ್ನಾಟಕ ಪ್ರೋಗ್ರಾಮ್ ಆಫೀಸರ್ ಮಂಜುಳಾ, ಅಗಸ್ತ್ಯ ಸಂಸ್ಥಾಪಕರಾದ ಶ್ರೀರಾಮ್, ರಾಘವನ್ ಇದ್ದರು.