ರಾಷ್ಟ್ರ ಭಾವ ಜಾಗೃತಿಗೊಳಿಸುವ ಆರ್‌ಎಸ್‌ಎಸ್

29ATHANIGRAMIN1
Published on

ಅಥಣಿ ಗ್ರಾಮೀಣ: ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಿದ್ದು, ಯುವಜನರು ಪಂಚ ಪರಿವರ್ತನೆ ಸಂದೇಶಗಳ ಅನುಷ್ಠಾನಕ್ಕೆ ಸಂಕಲ್ಪ ಮಾಡಬೇಕು ಎಂದು ಅಥಣಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಚಂದ್ರಶೇಖರ ಬಿರಾದಾರ ಕರೆ ನೀಡಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹನುಮ ದೇವಸ್ಥಾನದಲ್ಲಿ ಸ್ಥಳೀಯ ಆರ್‌ಎಸ್‌ಎಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಜಯದಶಮಿ ಹಾಗೂ ಆರ್‌ಎಸ್‌ಎಸ್ ನೂರರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್‌ಎಸ್‌ಎಸ್ ಇರುವುದು ದೇಶ ಮೊದಲು, ಒಂದು ದೇಶ ಎಂಬ ರಾಷ್ಟ್ರ ಭಾವ ಜಾಗೃತಿಗೊಳಿಸಲು. ಡಾ.ಕೇಶವ ಬಿಲಿರಾಂ ಹೆಡಗೇವಾರ್ ಸ್ಥಾಪಿತ ಈ ಸಂಘಟನೆ ೮೦ ಸಾವಿರ ಸಂಘಟನೆ ಹೊಂದಿದೆ. ಗೋಹತ್ಯೆ, ಲವ್ ಜಿಹಾದ್ ಹಾಗೂ ಹಿಂದುಗಳ ಮತಾಂತರಕ್ಕೆ ಯತ್ನ ನಡೆಯುತ್ತಿದ್ದು, ಆರ್‌ಎಸ್‌ಎಸ್ ಕಾರ್ಯಕರ್ತರು ಇದನ್ನು ತಡೆಯವ ಬಗ್ಗೆ ಆಲೋಚಿಸಬೇಕು ಎಂದರು.

ಗುರುಮೂರ್ತಯ್ಯ ಕಾಡದೇವರಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್‌ಎಸ್‌ಎಸ್ ದೇಶದ ರಕ್ಷಣೆಗಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ಆರ್‌ಎಸ್‌ಎಸ್ ಬೌದ್ಧಿಕ ಪ್ರಮುಖ ಸಂಗಮೇಶ ಯಲಗೋಣ, ಸ್ವಯಂಸೇವಕ ಕಾಕಾಸಾಹೇಬ ರುದ್ರಗೌಡರ, ಮಲಗೌಡ ನೇಮಗೌಡ, ರಮೇಶ ಮುದಕಣ್ಣವರ, ಸೋಮೇಶ ಜೋಶಿ, ಶಿವಗೌಡ ನೇಮಗೌಡ, ಮಹೇಶ ಕಾಡದೇವರಮಠ, ಚಂದ್ರಕಾಂತ ಶರಣ, ಮಹಾನಿಂಗ ಮಲಾಬಾದಿ, ಬಾವುಸಾಬ ಭೋಸಲೆ, ಪ್ರಜ್ವಲ ಕಾಡದೇವರಮಠ, ಆನಂದ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net