ರಾಷ್ಟ್ರ ಪ್ರೇಮಕ್ಕೆ ಪೂರಕ ವೀರಗಾಥಾ ಕಾರ‌್ಯಕ್ರಮ

CTD 31 M.NASIRUDDIN--02
Published on

ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸಲು ವೀರಗಾಥಾ 3.0 ಪ್ರಾಜೆಕ್ಟ್ ಸಹಕಾರಿಯಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿ ರುದ್ದೀನ್ ತಿಳಿಸಿದರು. ಕೇಂದ್ರದ ರಕ್ಷಣಾ ಮತ್ತು ಶಿಕ್ಷಣ ಸಚಿವಾಲಯಗಳು ವಿದ್ಯಾರ್ಥಿಗಳಲ್ಲಿ,ಶೌರ್ಯ ಪ್ರಶಸ್ತಿ ವಿಜೇತರು,ಸ್ವಾತಂತ್ರ್ಯ ಹೋರಾಟಗಾರರ ಕುರಿತು ಜಾಗೃತಿ ಮೂಡಿಸಲು ಆಯೋಜಿಸಿರುವ ಈ ಕಾರ‌್ಯಕ್ರಮದ ಕುರಿತು ಡಯಟ್‌ನಲ್ಲಿ ಸೋಮವಾರ ಏರ್ಪ ಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ,ಇದರ ಅಂಗವಾಗಿ ಶಾಲೆ,ಜಿಲ್ಲಾ,ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ 1ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳಿರುತ್ತವೆ.ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಿಕ್ಷಕರು,ಪಾಲಕರು ಪ್ರೇರಣೆ ನೀಡಬೇಕೆಂದರು.
ನೋಡಲ್ ಅಧಿಕಾರಿ ಎನ್.ಮಂಜುನಾಥ್ ಮಾತನಾಡಿ ಸ್ಪರ್ಧೆ ವಿವರ ತಿಳಿಸಿದರು. ನೋಡಲ್ ಅಧಿಕಾರಿ ಎಸ್.ಬಸವರಾಜು ಮಾ ತನಾಡಿ,ನಮ್ಮ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಶೌರ್ಯ ಪ್ರಶಸ್ತಿ ವಿಜೇತರು,ಸ್ವಾತಂತ್ರೃ ಹೋರಾಟ ಗಾರರ ಕುರಿತು ವಿದ್ಯಾರ್ಥಿಗಳು ವೈಯಕ್ತಿಕವಾಗಿ ಕವಿತೆ,ಚಿತ್ರಕಲೆ ಮೊದಲಾದ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸಿ ಸೆಪ್ಪೆಂಬರ್15 ರೊಳಗೆ ಶಾಲಾ ಹಂತದಿಂದ My Gov Portal ಗೆಅಪ್‌ಲೋಡ್ ಮಾಡಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net