

ದೇವಲಗಾಣಗಾಪುರ: ಅಫಜಲಪುರ ತಾಲೂಕಿನ ಬಂದರವಾಡ ಸರ್ಕಾರಿ ಪ್ರೌಢ ಶಾಲೆ ವಿಜಾನ ಶಿಕ್ಷಕಿ ಸುರೇಖಾ ಡೆಂಗಿ ಇವರಿಗೆ ಉತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ಘೋಷಣೆಯಾಗಿರುವುದರಿಂದ ಅಫಜಲಪುರ ಶಾಸಕರ ಪರವಾಗಿ ಜಿಪಂ ಸದಸ್ಯ ಅರುಣಕುಮಾರ ಪಾಟೀಲ್ ಹಾಗೂ ಜಿಪಂ ಉಪಾದ್ಯಕ್ಷೆ ಶೋಭಾ ಸಿರಸಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಶಿಕ್ಷಕಿ ಮನೆಗೆ ತೆರಳಿ ಗೃಹ ಸನ್ಮಾನ ಮಾಡಿದರು.
ಜಿಪಂ ಸದಸ್ಯ ಅರುಣಕುಮಾರ ಪಾಟೀಲ್ ಮಾತನಾಡಿ, ಅಫಜಲಪುರ ತಾಲೂಕಿಗೆ ರಾಷ್ಟ್ರ ಪ್ರಶಸ್ತಿತಂದು ಕೊಟ್ಟ ಸುರೇಖಾ ಅವರ ಪ್ರತಿಭೆಗೆ ಅಭಿನಂದನೆಗಳು. ಇದು ತಾಲೂಕಿಗೆ ಬಂದಂತಹ 3ನೇ ಪ್ರಶಸ್ತಿಯಾಗಿದೆ. ಬಂದರವಾಡ ಗ್ರಾಮೀಣ ಶಾಲೆ ಶಿಕ್ಷಕಿಯ ಪ್ರತಿಭೆ ರಾಷ್ರಮಟ್ಟದಲ್ಲಿ ಗುರುತಿಸಿರುವುದು ಸಂತಸ ಮೂಡಿಸಿದೆ. ಇಂತಹ ಶಿಕ್ಷಕರಿಂದ ತಾಲೂಕಿಗೆ ಉತ್ತಮ ಹೆಸರು ಬಂದಿದೆ ಎಂದು ಹೇಳಿದರು.
ಜಿಪಂ ಉಪಾಧ್ಯಕ್ಷೆ ಶೋಭಾ ಸಿರಸಗಿ,ಕ್ಷೇತ್ರ ಶಿಕ್ಷ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ, ಡಾ.ಜಗನ್ನಾಥ ಡೆಂಗಿ, ರಾಜು ಪಾಯದ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಸುರೇಖಾ, ನನ್ನಲ್ಲಿರುವ ಸೂಕ್ತ ಪ್ರತಿಭೆಗೆ ಪ್ರೋತ್ಸಾಹಿಸಿದ ಹಾಗೂ ಸಾಧನೆಗೆ ಸ್ಪೂತರ್ಿ ನೀಡಿದ ಕ್ಷೇತ್ರಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಹಾಗೂ ವಿಷಯ ಪರಿವೀಕ್ಷಕ ರಾಜು ಪಾಯದ ಅವರಿಗೆ ಹಾಗೂ ನಮ್ಮ ಶಾಲೆ ಶಿಕ್ಷಕ ವೃಂದಕ್ಕೂ ಹಾಗೂ ಗ್ರಾಮಸ್ಥರಿಗೂ, ವಿದ್ಯಾಥರ್ಿಗಳಿಗೂ ಅಭಿನಂದಿಸುತ್ತೇನೆ ಎಂದು ಹೇಳಿದರು.
ಸಿದ್ದು ಶಿರಸಗಿ, ವಿಜಯಕುಮಾರ ಸಾಲಿಮಠ, ಮುಖ್ಯ ಗುರು ಶಿವಕುಮಾರ, ಬಿ.ಎಚ್.ಬಗಲಿ, ಉಪನ್ಯಾಸಕರಾದ ಬಿ.ಎಸ್. ಮಾಲಿಪಾಟೀಲ್, ಪ್ರಭವ ಪಟ್ಟಣಕರ, ಶಿಕ್ಷಕರಾದ ಸೋಮು ಕುಂಬಾರ, ಸೇವಚಿತಾ ಪ್ರೇಮಸಿಂಗ್, ವಿಜಯಕುಮಾರ ತೇಗಲತಿಪ್ಪಿ, ಸುನೀತಾ ಭರಣಿ, ಸುಧಾ ರಂಗೋಲಿ ಸನ್ಮಾನಿಸಿದರು.