ರಾಷ್ಟ್ರ ಪುರುಷರ ಆದರ್ಶ ಮೈಗೂಡಿಸಿಕೊಳ್ಳಲಿ

12npn2a
Published on

ನಿಪ್ಪಾಣಿ: ಜೊಲ್ಲೆ ಗ್ರೂಪ್ ಹಾಗೂ ವಿಶ್ವ ಹಿಂದು ಪರಿಷತ್, ಬಜರಂಗದಳ ತಾಲೂಕು ಘಟಕಗಳ ಆಶ್ರಯದಲ್ಲಿ ಹನುಮ ಮಾಲಾಧಾರಿಗಳ ಅಂಜನಾದ್ರಿ ಬೆಟ್ಟದ ಯಾತ್ರೆ ಅಂಗವಾಗಿ ಪಟ್ಟಣದ ಮುನ್ಸಿಪಲ್ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಹನುಮ ಮೂರ್ತಿ ಪೂಜೆ ನೆರವೇರಿಸಲಾಯಿತು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ತಾಲೂಕಿನ 2,100ಕ್ಕೂ ಅಧಿಕ ಹನುಮ ಭಕ್ತರು 43 ಬಸ್‌ಗಳ ಮೂಲಕ ಅಂಜನಾದ್ರಿ ಬೆಟ್ಟದ ಯಾತ್ರೆಗೆ ತೆರಳಿದರು. ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಮಹಾನ್ ರಾಷ್ಟ್ರ ಪುರುಷರ ಆದರ್ಶಗಳನ್ನು ಮೈಗೂಡಿಸಿಕೊಂಡು ಯುವಕರು ಕ್ರಿಯಾಶೀಲರಾಗಬೇಕು ಎಂದರು.

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಂಕರ ಗಾಯಕರ, ಬಸವಪ್ರಸಾದ ಜೊಲ್ಲೆ ಮಾತನಾಡಿದರು. ಸ್ಥಳೀಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಸೋನಲ್ ಕೊಠಡಿಯಾ, ಮಲಗೊಂಡಾ ಪಾಟೀಲ, ಪವನ ಪಾಟೀಲ, ಸುನೀಲ ಪಾಟೀಲ, ಸೂರಜ್ ಖವರೆ, ಸಿದ್ದು ನರಾಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net