ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಹಿರಿದು

ctd----06 sjm
Published on

ಚಿತ್ರದುರ್ಗ: ರಾಷ್ಟ್ರ ನಿರ್ಮಾಣದಲ್ಲಿ ಹಿರಿದಾದ ಪಾತ್ರವನ್ನು ವಹಿಸುವ ಯುವಕರು,ಸಕಾರಾತ್ಮಕ ದಿಕ್ಕಿನಲ್ಲಿ ಶಿಕ್ಷಣ ಪಡೆಯುವುದು ಅಗತ್ಯವಿದೆ ಎಂ ದು ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ‌್ಯ ಡಾ.ಎಲ್.ಈಶ್ವರಪ್ಪ ಹೇಳಿದರು.

ಮಹಾ ವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ‘ಸಮೂಹ ಮಾಧ್ಯಮಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವೊ ಮಾರಕವೋ’ಕುರಿತ ಚರ್ಚಾ ಸ್ಪರ್ಧೆ ಮತ್ತು ‘ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ’ದ ಪ್ರಬಂಧ ಸ್ಪರ್ಧೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅ ವರು ಮಾತನಾಡಿದರು.

ಯಾವುದೇ ದೇಶದ ಯುವಕರು ತಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುತ್ತಾರೆ. ಶೇ.30-40ಯಲ್ಲಿರುವ ಯುವಕರ ಪೈಕಿ ಶೇ.10 ಸಂಖ್ಯೆ ಯುವಕರು ಶ್ರಮಿಸಿದರೂ ದೇಶ ಪ್ರಗತಿಗೆ ಉತ್ತಮ ಕೊಡುಗೆಯನ್ನು ಕೊಡಲು ಸಾಧ್ಯವಿದೆ. ಸಕಾರಾತ್ಮಕ ಗುಣಲಕ್ಷಣಗಳಿರುವ ಸಮೂಹ ಮಾಧ್ಯಮಗಳಿಂದು ಅನೇಕ ಸವಾಲುಗಳನ್ನು ಎದುರಿಸುತ್ತಿವೆ.

ಇವತ್ತಿನ ಡಿಜಿಟಲ್ ಯುಗದಲ್ಲಿ ಸುದ್ದಿ ನೈಜತೆಯನ್ನು ನಿರ್ಧರಿಸುವುದು ಕೂಡ ಸವಾಲಾಗಿದ್ದು, ಅನೇಕ ಸಂದರ್ಭಗಳಲ್ಲಿ ಗ್ರಹಿಕೆ ಮ ತ್ತು ನಿರ್ಧಾರದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಾಧ್ಯಾಪಕರಾದ ಪ್ರೊ.ಪರ ಮೇಶ್ವರ,ಪ್ರೊ.ಜಿ.ಎನ್.ನಾಗರಾಜು,ಡಾ.ಸಿ.ಟಿ.ಜಯಣ್ಣ,ಆಯೋಜಕರಾದ ವಿಶ್ವನಾಥ್,ಟಿ.ಗಿರೀಶ್ ಇದ್ದರು. ಜಿಲ್ಲೆಯ ವಿವಿಧ ಕಾ ಲೇಜುಗಳು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net