

ಮಾಲೂರು: ದೇಶದಲ್ಲಿ ವಿಶ್ವ ಹಿಂದು ಪರಿಷದ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂ ರಾಷ್ಟ್ರ ಧ್ವಜದ ಗೌರವಕ್ಕಾಗಿ ಹೋರಾಟ ಮಾಡುತ್ತಿದೆಯೇ ಹೊರೆತು ದೇವಸ್ಥಾನಕ್ಕಾಗಿ, ಹಿಂದು ಧರ್ಮಕ್ಕಾಗಿ ಹೋರಾಟ ಮಾಡುತ್ತಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂದ ವಿಚಾರಕರು, ಪರ್ಯಾವರಣ ಗತಿವಿಧಿಯ ರಾಜ್ಯ ಸಂಯೋಜಕ ಜಯರಾಮಬೊಳ್ಳಾಜೆ ತಿಳಿಸಿದರು.
ಪಟ್ಟಣದ ಅರಳೇರಿ ರಸ್ತೆಯಲ್ಲಿರುವ ಸಾಯಿಬಾಬಾ ದೇವಾಲಯದ ಬಳಿ ತಾಲೂಕು ವಿಶ್ವ ಹಿಂದು ಪರಿಷದ್ನಿಂದ ಶ್ರೀರಾಮೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಶೋಭಾಯಾತ್ರೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಉದ್ದಗಲಕ್ಕೂ ರಾಮನ ಸ್ಮರಣೆ ನಡೆಯುತ್ತಿದೆ. ತಮ್ಮ ಜೀವನದಲ್ಲಿ ಹಿಂದು ಧರ್ಮದ ಸಂಸತಿಯನ್ನು ಅಳವಡಿಸಿಕೊಂಡು ಪ್ರತಿ ಮನೆಯಲ್ಲೂ ಸತ್ಸಂಗಗಳನ್ನು ಮಾಡಿ ರಾಮಾಯಣ, ಮಹಾಭಾರತದ ನೀತಿ ಕಥೆಗಳನ್ನು ಮಕ್ಕಳಿಗೆ ಬೋಧಿಸಬೇಕು. ರಾಷ್ಟ್ರೀಯ ಏಕ ಶಿಕ್ಷಣ ನೀತಿ ದೇಶದಲ್ಲಿ ಜಾರಿಯಾಗಿದೆ. ಇದರಿಂದ ಹಿಂದುಗಳ ಜಾಗೃತಿಯಾಗುತ್ತದೆ. ಹಿಂದು ಧರ್ಮದ ವಿರುದ್ಧ ಟೀಕಿಸುವಂತಹ ಮಾಜಿ ಸಿಎಂ ಹಾಗೂ ರಾಜಕೀಯ ವ್ಯಕ್ತಗಳ ಭವಿಷ್ಯವನ್ನು ಮುಕ್ತಾಯಗೊಳಿಸುವ ಕೆಲಸ ಹಿಂದು ಸಮಾಜ ಸ್ವಾಭಿಮಾನದಿಂದ ಮಾಡಬೇಕು. ವಿಶ್ವ ಹಿಂದು ಪರಿಷದ್ ಹಾಗೂ ಆರ್ಎಸ್ಎಸ್ ಸಂಟನೆಗಳು ಹಳ್ಳಿಗಳಲ್ಲಿ ಸಂಟನೆ ಬೆಳಸಿ ಜಾಗೃತಿ ಮೂಡಿಸಬೇಕು ಎಂದರು.
ಕೋಲಾರ ತಾಲೂಕಿನ ನಾಗಲಾಪುರ ಸಂಸ್ಥಾನಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯಸ್ವಾಮಿಗಳು ಆರ್ಶಿವಚನ ನೀಡಿ ಮಾತನಾಡಿ, ದೇಶದಲ್ಲಿ 500 ವರ್ಷಗಳ ಹೋರಾಟದಿಂದ ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಿ ಗರ್ಭಗುಡಿಯ ಪೂಜೆ ಮಾಡಿರುವುದರೊಂದಿಗೆ ಸ್ಫೂರ್ತಿದಾಯಕವಾಗಿದೆ. ಭಾರತ ಭೂಮಿ ಪುಣ್ಯಭೂಮಿ. ಧರ್ಮಕ್ಕೆ ಕಂಟಕ ಬಂದಾಗ ಭಗವಂತ ಭೂಮಿಗೆ ಇಳಿದುಬಂದು ದುಷ್ಟಸಂಹಾರ ಮಾಡುತ್ತಾನೆ ಎಂದರು.
ಹೊಸಕೋಟೆ ತಾಲೂಕಿನ ಶಿವನಾಪುರದ ಆದಿಶಕ್ತಿ ಮಹಾಸಂಸ್ಥಾನಮಠದ ಶ್ರೀ ಪ್ರಣವಾನಂದ ಪುರಿ ಸ್ವಾಮೀಜಿ ಮತ್ತು ಮಾಲೂರಿನ ಸಾಯಿಬಾಬಾ ದೇವಾಲಯದ ಅಧ್ಯಕ್ಷ ಸಿ.ಅಪ್ಪಾಜಿಗೌಡ, ವಿಶ್ವ ಹಿಂದು ಪರಿಷತ್ತಿನ ಬಸವರಾಜ್ ಮಾತನಾಡಿದರು.
ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ, ರಾಜ್ಯ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಸದಸ್ಯ ಹೂಡಿ ವಿಜಯ್ಕುಮಾರ್, ಮಾಜಿ ಶಾಸಕ ಕೆ.ಎಸ್.ಮಂಜುನಾಥ್ಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಂ.ರಾಮಮೂರ್ತಿ, ಗ್ರಾಪಂ ಪ್ರಕೋಷ್ಠ ಸಮಿತಿ ಅಧ್ಯಕ್ಷ ಆರ್.ಪ್ರಭಾಕರ್, ಹೈನುಗಾರಿಕೆಯ ಪ್ರಕೋಷ್ಠ ಸಮಿತಿ ಸದಸ್ಯ ವೆಂಕಟೇಶ್ಗೌಡ, ಶ್ರೀರಾಮೋತ್ಸವ ಕಾರ್ಯಕ್ರಮ ಅಧ್ಯಕ್ಷ ರಾಮ್ಪ್ರಕಾಶ್, ಜಿಲ್ಲಾ ರಾಷ್ಟ್ರೀಯ ಸ್ವಯಂಸೇವಕ ಸಂದ ಕಾರ್ಯವಾಹಕ ಶ್ರೀನಿವಾಸ್, ತಾಲೂಕು ವಿಶ್ವ ಹಿಂದು ಅಧ್ಯಕ್ಷ ಎಂ.ನಾರಾಯಣಸ್ವಾಮಿ, ನಗರಾಧ್ಯಕ್ಷ ಎಂ.ಎಸ್.ನಂಜುಂಡೇಶ್ವರ, ಪುರಸಭೆ ಸದಸ್ಯ ಭಾನುತೇಜ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯೆ ಪದ್ಮಾವತಿ ನಾರಾಯಣಸ್ವಾಮಿ, ಯೋಜನಾಪ್ರಾಧಿಕಾರದ ಅಧ್ಯಕ್ಷ ಸತೀಶ್ ಆರಾಧ್ಯ, ರಾಮೋತ್ಸವ ಸಮಿತಿಯ ಪದಾಧಿಕಾರಿಗಳಾದ ಎಂ.ಎಲ್.ಆರ್.ರಾಮಮೂರ್ತಿ, ಅಪ್ಪಿರಾಜು, ಎಂ.ಎಸ್.ದೇವರಾಜರೆಡ್ಡಿ, ಶಂಕರ್ ಮತ್ತಿತರರಿದ್ದರು.
ಅದ್ದೂರಿ ಶೋಭಾಯಾತ್ರೆ: ಶ್ರೀರಾಮೋತ್ಸವ ಪ್ರಯುಕ್ತ ಪಟ್ಟಣದ ಮಹಾರಾಜವೃತ್ತದಿಂದ ಹಮ್ಮಿಕೊಂಡಿದ್ದ ಶೋಭಾಯಾತ್ರೆಯು ರಾಜಬೀದಿಗಳಲ್ಲಿ ಹೋಗುತ್ತಿದ್ದಾಗ ಸಾರ್ವಜನಿಕರು, ಸುಮಂಗಲಿಯರು ಬೀದಿಗಳಲ್ಲಿ ಯಾತ್ರೆಗೆ ನೀರನ್ನು ಸಿಂಪಡಿಸಿ ಶ್ರೀರಾಮಚಂದ್ರನ ಮೂರ್ತಿಗೆ ಪೂಜೆಸಲ್ಲಿಸಿ ಹೂಗಳನ್ನು ಚೆಲ್ಲುವುದರ ಮೂಲಕ ಸ್ವಾಗತ ಕೋರಿದರು. ರಸ್ತೆಗಳಲ್ಲಿ ಪಾನಕ, ಕೋಸಂಬರಿ ವಿತರಿಸಲಾಯಿತು. ಊಟದ ವ್ಯವಸ್ಥೆ ಮಾಡಲಾಗಿತ್ತು. ಯಾತ್ರೆಯಲ್ಲಿ ಶ್ರೀರಾಮಚಂದ್ರನ ಭಜನ, ಸ್ಮರಣೆ ಮಾಡಲಾಯಿತು.