

ಬಸವಕಲ್ಯಾಣ: ದೇಶದ ಸಂಸ್ಕೃತಿಗೆ ಹೊಸ ಧರ್ಮ ಕೊಟ್ಟು ರಾಷ್ಟ ಕಟ್ಟಿದ ಶ್ರೇಷ್ಠ ದಾರ್ಶನಿಕ ಬಸವಣ್ಣ ಎಂದು ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಬಣ್ಣಿಸಿದರು.
ಅಂತಾರಾಷ್ಟಿಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವAತ ಹರಳಯ್ಯ ಪೀಠದ ಸಹಯೋಗದಡಿ ನಗರದ ಹರಳಯ್ಯ ಗವಿಯಲ್ಲಿ ಭಾನುವಾರ ಆಯೋಜಿಸಿದ್ದ ಶರಣ ವಿಜಯೋತ್ಸವ, ನಾಡಹಬ್ಬ ಮತ್ತು ಹುತಾತ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಬಸವಣ್ಣವರು ಕಟ್ಟಿದ್ದು ರಾಷ್ಟಿಯ ಧರ್ಮ. ಕಾಯಕ, ದಾಸೋಹ, ಅನ್ನ, ಅರಿವು ಆಶ್ರಯಕ್ಕೆ ಮಹತ್ವ ನೀಡಿದ್ದು, ರಾಷ್ಟç ಧರ್ಮವೇ ಬಸವ ಧರ್ಮ ಎಂದು ವಿಶ್ಲೇಷಿಸಿದರು.
ಹುತಾತ್ಮ ದಿನಾಚರಣೆ ಪದಕ್ಕೆ ವಿಶಾಲ ಅರ್ಥವಿದೆ. ಇದು ಸಾಮಾನ್ಯ ವೇದಿಕೆಯಲ್ಲ. ಮಾನವ ಅಸ್ಮಿತೆ ಗುರುತಿಸುವ ವೇದಿಕೆ. ಕರ್ನಾಟಕದ ಲಿಂಗಾಯತ ಮಹನೀಯರ ಕುರಿತು ವಿಚಾರ ಸಂಕಿರಣ ಇಲ್ಲಿ ನಡೆಯಬೇಕು ಎಂದರು.
ಶಾಸಕ ಶರಣು ಸಲಗರ ಮಾತನಾಡಿ, ಸಮ ಸಮಾಜಕ್ಕಾಗಿ ನಡೆದ ಕಲ್ಯಾಣ ಕ್ರಾಂತಿಯನ್ನು ಯಾರೂ ಮರೆಯಲಾಗದು. ಬಸವ ತತ್ವದ ಪರಿಪಾಲನೆ ಆಗಬೇಕು. ಕಲ್ಯಾಣ ನೆಲದಲ್ಲಿ ಆಕಳು ಎತ್ತುಗಳ ನೆತ್ತರು ಹರಿಯುವುದು ನಿಲ್ಲಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದರು.
ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಮಾಜಿ ಶಾಸಕ ಎಂ.ಜಿ. ಮುಳೆ ಮಾತನಾಡಿದರು. ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ನಿರ್ದೇಶಕ ಅನೀಲಕುಮಾರ ರಗಟೆ, ಅನುಭವ ಮಂಟಪ ಟ್ರಸ್ಟ್ ಉಪಾಧ್ಯಕ್ಷ ವೈಜನಾಥ ಕಾಮಶೆಟ್ಟಿ, ಮುಖಂಡ ಶಿವರಾಜ ನರಶೆಟ್ಟಿ, ಶಂಕ್ರೆಪ್ಪ ಹೊನ್ನಾ, ಸೂರ್ಯಕಾಂತ ಕಾಂಬಳೆ, ಸುಲೋಚನಾ ಮಾಮಾ ಇತರರಿದ್ದರು.
ಹರಳಯ್ಯ ಸಮಾಜದ ಕಾಶೀರಾಯ ನಂದೂರಕರ್ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಸವರಾಜ ಬಾಲಿಕಿಲೆ ಸ್ವಾಗತಿಸಿದರು. ಮೇನಕಾ ಪಾಟೀಲ್ ನಿರೂಪಣೆ ಮಾಡಿದರು. ಅಶ್ವಿನಿ ಅವರ ವಚನ ಸಂಗೀತ ಹಾಗೂ ಪ್ರಿಯದರ್ಶಿನಿಯ ವಚನ ನೃತ್ಯ ಗಮನ ಸೆಳೆಯಿತು.